ಸುಳ್ಯ ಸರಕಾರಿ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿರುವ ಪೇಷೆಂಟ್‌ಗಳಿಗೆ ಸ್ನಾನಕ್ಕೆ ಬಿಸಿನೀರು ಸಿಗದಿರುವ ಬಗ್ಗೆ ಅಮರ ಸುದ್ದಿ ವರದಿ ಪ್ರಕಟಿಸಿದ ಬೆನ್ನಲ್ಲೇ ಸಚಿವರು ಆರೋಗ್ಯಾಧಿಕಾರಿಗಳಿಗೆ ನಾಳೆಯೇ ಗೀಸರ್ ಅಳವಡಿಸಲು ಸೂಚಿಸಿದ್ದಾರೆ. ಇಂದು ಕಾರ್ಯನಿಮಿತ್ತ ಸುಳ್ಯಕ್ಕೆ ಬಂದಾಗ ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ನಾಳೆಯೇ ಸಮಸ್ಯೆ ನಿವಾರಿಸುವುದಾಗಿ ಹೇಳಿದರಲ್ಲದೆ ತಾಲೂಕು ವೈದ್ಯಾಧಿಕಾರಿಯವರನ್ನು ಕರೆದು ತಕ್ಷಣ ಬಿಸಿನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಆ ಬಳಿಕ ಪತ್ರಕರ್ತರೊಡನೆ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾ. ಸುಬ್ರಹ್ಮಣ್ಯರವರು ‘ಇಲೆಕ್ಟ್ರಿಕಲ್ ಕೆಲಸದವರು ಕೋವಿಡ್ ವಾರ್ಡ್‌ಗೆ ಬರಲು ಹಿಂಜರಿಯುತ್ತಿದ್ದುದರಿಂದಾಗಿ ಗೀಸರ್ ಅಳವಡಿಸಲು ಆಗಿರಲಿಲ್ಲ ಎಂದು ಸಮಜಾಯಿಸಿಕೆ ನೀಡಿದ್ದಲ್ಲದೇ, ಈಗ ಒಬ್ಬರು ಎಲೆಕ್ಟ್ರೀಷಿಯನ್ ಒಪ್ಪಿಕೊಂಡಿದ್ದಾರೆ. ಅವರು ನಾಳೆಯೇ ಗೀಸರ್ ಅಳವಡಿಸುತ್ತಾರೆ. ಬಳಿಕ ಕೋವಿಡ್ ಪಾಸಿಟಿವ್ ಬಂದು ಆಸ್ಪತ್ರೆಯಲ್ಲಿರುವ ಎಲ್ಲರಿಗೂ ಸ್ನಾನಕ್ಕೆ ಬಿಸಿನೀರು ನೀಡಲಾಗುತ್ತದೆ’ ಎಂದು ಹೇಳಿದರು.
- Tuesday
- December 3rd, 2024