

ಮಿತ್ರಬಳಗ (ರಿ.) ಕಾಯರ್ತೋಡಿ ಮತ್ತು ಊರ ದಾನಿಗಳ ಸಹಕಾರದೊಂದಿಗೆ ಇಂದು ಗಾಂಧಿನಗರ ಶಾಲೆ ಹಿಂಭಾಗದ ಕಾಂಕ್ರೀಟ್ ರಸ್ತೆ ಹಾಗೂ ಉಬರಡ್ಕ ರಸ್ತೆಯಿಂದ ಕಾಯರ್ತೋಡಿ ಬೈಲಿಗೆ ಬರುವ ಕಾಂಕ್ರೀಟ್ ರಸ್ತೆ ಜಾರುವ ಸ್ಥಿತಿಯಲ್ಲಿದ್ದ ಕಾರಣ ಬ್ಲೀಚಿಂಗ್ ಪೌಡರ್, ಸುಣ್ಣ ಹಾಗೂ ಮರಳು ಹಾಕಿ ಶುಚಿಗೊಳಿಸುವ ಮೂಲಕ ಶ್ರಮದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಿತ್ರ ಬಳಗದ ಅಧ್ಯಕ್ಷ ಮಹೇಶ್ ಕುದ್ಪಾಜೆ ಪದಾಧಿಕಾರಿಗಳು, ಪೂರ್ವಾಧ್ಯಕ್ಷರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.