

ಸಂಪಾಜೆ ಗ್ರಾಮ ಪಂಚಾಯತ್ ವಠಾರದಲ್ಲಿ 74 ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ನಾಗರಾಜ್ ನೆರವೇರಿಸಿದರು. ಕಲ್ಲುಗುಂಡಿ ಶಾಲಾ ದೈಹಿಕ ಶಿಕ್ಷಕ ಧನಂಜಯ ಮಾಸ್ಟರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಭರತ್ ಸ್ವಾಗತಿಸಿ ಮಾಜಿ ಅಧ್ಯಕ್ಷ ಹಮೀದ್ ಜಿ. ಕೆ.ವಂದಿಸಿದರು ಕಾರ್ಯಕ್ರಮದಲ್ಲಿ ಉಮೇಶ್,ಹನೀಫ್ ಎಸ್.ಕೆ. ಮಧುರ. ಹಸೈನಾರ್, ಮೊಹಮದ್ ಕಾನಕೋಡ್ ರಾಜೇಶ್ ಉಪಸ್ಥಿತರಿದ್ದರು. ಈ ಸಂದರ್ಭ ಉಮ್ಮರ್ ಬೀಜದಕಟ್ಟೆ ಯವರ ಸಜ್ಜನ ಪ್ರತಿಷ್ಠಾನ ದ ಮೂಲಕ ಕೊಡಮಾಡುವ ಕಿಟ್ಟನ್ನು ಅಂಗವಿಕಲ ರಾದ ಜಯಂತಿ ನೆಲ್ಲಿಕುಮೇರಿ ಯವರಿಗೆ ಅವರ ತಾಯಿಯ ಮೂಲಕ ಹಸ್ತಾಂತರಿಸಲಾಯಿತು.