
2019 -20 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕುಮಾರಸ್ವಾಮಿ ಸುಬ್ರಹ್ಮಣ್ಯ ಶಾಲೆಗೆ ದ್ವಿತೀಯ ಸ್ಥಾನ ಗಳಿಸಿ 625 ರಲ್ಲಿ 615 ಅಂಕಗಳೊಂದಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹರೀಶ್ ಪೂಜಾರಿಕೋಡಿ ಮತ್ತು ಪ್ರೇಮ ದಂಪತಿಯ ಪುತ್ರಿ ಸಾಗರಿಕಾ ಪೂಜಾರಿಕೋಡಿ ಇವರನ್ನು ಯುವ ಸ್ಪಂದನ ಟ್ರಸ್ಟ್ ಗುತ್ತಿಗಾರು ವತಿಯಿಂದ ಫಲಪುಷ್ಪ ಹಾಗೂ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕೆ.ಬಿ. ನವೀನ್ ಕುಮಾರ್, ಉಪಾಧ್ಯಕ್ಷ ರವೀಶ್ ಮೊಟ್ಟೆ, ಕಾರ್ಯದರ್ಶಿ ಶರತ್ ಎನ್ ಕೆ, ಚರಣ್ ಸಾಯಿ ಮಧುರ,ಚೇತನ್ ಡಿ., ಚಂದ್ರಶೇಖರ್ ಪಾರೆಪ್ಪಾಡಿ, ರಾಜಿತ್ ಎನ್ ಕೆ, ಶಿವರಾಮ್ ಎಂ., ಪ್ರಶಾಂತ್ ಬಾಕಿಲ, ಶ್ರೇಯಸ್ ಮುತ್ಲಾಜೆ ಹಾಗೂ ಪೋಷಕರು ಉಪಸ್ಥಿತರಿದ್ದರು.
