
ಗುತ್ತಿಗಾರು ಪದವಿ- ಪೂರ್ವ ಕಾಲೇಜಿನಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜು ಸಿಬಿಸಿ ಕಾರ್ಯದ್ಯಕ್ಷರಾದ ಶ್ರೀ ಮಂಜುನಾಥ ಯು ಧ್ವಜಾರೋಹಣ ನೆರವೇರಿಸಿದರು. ಎಸ್ ಡಿ ಎಂ ಸಿ ಕಾರ್ಯಧ್ಯಕ್ಷರಾದ ಶ್ರೀ ಲೋಕೇಶ್ವರ ಡಿ ಆರ್, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ನೆಲ್ಸನ್ ಕ್ಯಾಸ್ಟಲಿನೊ ಸ್ವಾತಂತ್ರ್ಯ ದಿನಾಚರಣೆಯ ಕುರಿತು ಮಾತನಾಡಿದರು. ಪ್ರಾಂಶುಪಾಲರಾದ ಚೆನ್ನಮ್ಮ ಪಿ, ಎಸ್ ಡಿ ಎಂ ಸಿ ಸದಸ್ಯರು, ಉಪನ್ಯಾಸಕರು, ಶಿಕ್ಷಕರು ಸಭೆಯಲ್ಲಿ ಉಪಸ್ಥಿತಿ ತರಿದ್ದರು. ಹಿಂದಿ ಶಿಕ್ಷಕರಾದ ಪ್ರಸನ್ನ ಕುಮರ್ ವೈ ಡಿ ಧನ್ಯವಾದ ಅರ್ಪಿಸಿದರು.