


ಸರಕಾರಿ ಪ್ರೌಢ ಶಾಲೆ ಎಲಿಮಲೆ ಇಲ್ಲಿ 74 ನೆ ಸ್ವಾತಂತ್ರ್ಯ ಉತ್ಸವವನ್ನು ಆಚರಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ್ ನಂದಗೋಕುಲ ಇವರು ದ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.
ಈ ಸಂದರ್ಭ 2019-20 ರ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ದ್ವೀತಿಯ ಸ್ಥಾನ ಹಾಗೂ ಸರಕಾರಿ ಪ್ರೌಢ ಶಾಲೆಗಳಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ತಮ್ಮದೆ ಶಾಲಾ ವಿಧ್ಯಾರ್ಥಿನಿಯನ್ನು ಶಾಲ ಮುಖ್ಯ ಶಿಕ್ಷಕ ಚಂದ್ರಶೇಖರ್ ಪೆರಾಲ್ ಸನ್ಮಾನಿಸಿ ಗೌರವಿಸಿದರು. ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್ ಪೆರಾಲ್ ಎಲ್ಲರನ್ನೂ ಸ್ವಾಗತಿಸಿ ಪ್ರಸ್ತಾವನೆ ಗೈದರು.
ಶಾಲಾಭಿವೃದ್ದಿ ಸಮಿತಿ ಪೂರ್ವಾಧ್ಯಕ್ಷ ಪುರುಷೋತ್ತಮ ಕಜೆ, ಸಮಿತಿ ಸದಸ್ಯರಾದ ಭರತ್ ಪಾರೆಮಜಲು, ನಾರಾಯಣ ನಾಯ್ಕ ,ಶಿಕ್ಷಕರಾದ ವಸಂತ್ ನಾಯಕ್ ,ರಾಜೇಶ್ವರಿ , ವಿರೂಪಾಕ್ಷಪ್ಪ, ಮುರಳೀಧರ, ಸುಂದರ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ಗೋಪಿನಾಥ ಇವರು ಎಲ್ಲರನ್ನೂ ವಂದಿಸಿದರು. ಶಿಕ್ಷಕಿ ತಿರುಮಲೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು.