
ಬಾಳಿಲ ಗ್ರಾಮ ಪಂಚಾಯತ್ ನಲ್ಲಿ ನಡೆದ 74 ನೇ ಸ್ವಾತಂತ್ರ್ಯ ದಿನಾಚರಣೆಯಂದು ಆಡಳಿತಾಧಿಕಾರಿ ನಿರಂಜನ ಚಿದಾನಂದ ಹಿರೇಮಠ್ ಧ್ವಜಾರೋಹಣಗೈದು ಶುಭಹಾರೈಸಿದರು. ಈ ಸಂದರ್ಭದಲ್ಲಿ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ಧ್ವಜಸ್ತಂಭದ ದಾನಿಗಳಾದ ಶಾರದೋತ್ಸವ ಸಮಿತಿ ಅಧ್ಯಕ್ಷ ರೋಹಿತ್, ಬಾಳಿಲದ ನಾಗರಿಕ ಸೇವಾ ಸಮಿತಿಯ ಗಂಗಾಧರ, ಪಂಚಾಯತ್ ಪೂರ್ವಾಧ್ಯಕ್ಷರು, ಸದಸ್ಯರು, ಕಾರ್ಯದರ್ಶಿ ಜಯಶೀಲಾ ರೈ, ಪಂಚಾಯತ್ ಸಿಬ್ಬಂದಿಗಳು, ಕೊರೊನಾ ಕಾರ್ಯಪಡೆ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪಿಡಿಒ ಚಂದ್ರಾವತಿ ಸ್ವಾಗತಿಸಿ, ವಂದಿಸಿದರು. ಗ್ರಂಥಾಲಯ ಮೇಲ್ವಿಚಾರ ಬಾಬು ಎಂ. ವಂದಿಸಿದರು.