ವ್ಯಾಪಕವಾಗಿ ಕೊಡಗಿನಲ್ಲಿ ಸುರಿದ ಮಳೆಗೆ ನೂರಾರು ವಿದ್ಯುತ್ ಕಂಬಗಳು ಹಾನಿಯಾಗಿ ಜನ ಕತ್ತಲೆಯಲಿದ್ದರು. ಕಳೆದ ಬಾರಿ ಕೂಡ ಕೊಡಗಿನಲ್ಲಿ ವ್ಯಾಪಕವಾಗಿ ಹಾನಿಯಾಗಿದ್ದ ವಿದ್ಯುತ್ ಲೈನ್ ಅನ್ನು ಸುಳ್ಯದ ತಂಡ ದುರಸ್ತಿಪಡಿಸಿತ್ತು. ಈ ಬಾರಿ ಹಾನಿಯಾದ ವಿದ್ಯುತ್ ಲೈನ್,ಕಂಬ ಅಳವಡಿಕೆಯಲ್ಲಿ ಸುಳ್ಯದ ಆನಂದ ಇಲೆಕ್ಟ್ರೀಕಲ್ ತಂಡ ಕಳೆದ 10 ದಿನಗಳಿಂದ ನಿರಂತರ ಸೇವೆ ಒದಗಿಸಿದೆ. ಆ ಮೂಲಕ ಕತ್ತಲೆಯಲ್ಲಿದ್ದ ಅದೆಷ್ಟೋ ಮನೆಗಳಿಗೆ ಬೆಳಕು ನೀಡುವಲ್ಲಿ ಚೆಸ್ಕಾಂ ಜತೆ ಕೈ ಜೋಡಿಸಿದೆ. ಕೊಡಗಿನ ವಿವಿಧೆಡೆ ಧಾರಕಾರ ಮಳೆ ಸುರಿಯಿತ್ತಿದ್ದರೂ, ಗುಡ್ಡ,ಬರೆ ಕುಸಿತದಂತಹ ಘಟನೆಗಳು ಕಣ್ಣೆದುರಿಗೆ ಇದ್ದರೂ ಅದ್ಯಾವುದನ್ನು ಲೆಕ್ಕಿಸದೇ ಇವರು ಜನರಿಗೆ ವಿದ್ಯುತ್ ಒದಗಿಸುವಲ್ಲಿ ಶ್ರಮಿಸಿದ್ದಾರೆ. ಇವರ ಶ್ರಮಕ್ಕೆ ಬೆಂಗಾವಲಾಗಿ ಇಲೆಕ್ಟ್ರೀಕಲ್ಸ್ ನ ಮಾಲಕರಾದ ಆನಂದ ಪೂಜಾರಿ ಯವರು ಇರುವ ಧೈರ್ಯದಿಂದಲೇ ಇಂತಹ ಕಷ್ಟಕರ ಪ್ರದೇಶಗಳಲ್ಲಿ ಕೂಡ ಕೆಲಸಕ್ಕೆ ತೆರಳಲು ಹಿಂಜರಿಯುತ್ತಿಲ್ಲ. ಏನೇ ಆದರೂ ಆನಂದಣ್ಣ ಕೈ ಬಿಡಲಿಕ್ಕಿಲ್ಲ ಎನ್ನುವ ಧೈರ್ಯ ಸಿಬ್ಬಂದಿ ಗಳಲ್ಲಿದೆ. ವಿದ್ಯುತ್ ಕಾಮಗಾರಿಯ ಕೆಲಸಗಳಲ್ಲಿ ಎಷ್ಟೇ ಜಾಗರುಕತೆ ವಹಿಸಿದ್ದರೂ ತೊಂದರೆಗಳಾಗುವುದು ಸಹಜ,ಇಂತಹ ಸಂದರ್ಭಗಳಲ್ಲಿ ಸಿಬ್ಬಂದಿಗಳಿಗೆ ಸಮಸ್ಯೆ ಉಂಟಾದಾಗ ಅವರಿಗೆ ಬೇಕಾದ ಚಿಕಿತ್ಸೆ, ನೆರವು ನೀಡುವಲ್ಲಿ ಹಿಂದೆ ಮುಂದೆ ನೋಡಿಲ್ಲ, ಎಷ್ಟೇ ಖರ್ಚಾದರೂ ಭರಿಸಿದ್ದಾರೆ ಎನ್ನುತ್ತಾರೆ ಸಿಬ್ಬಂದಿಗಳು.
- Saturday
- November 23rd, 2024