
ಮಡಿಕೇರಿಯ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಯೊಬ್ಬರಿಗೆ ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗುತ್ತಿದ್ದು, ಮದ್ಯಾಹ್ನ 2.30 ರ ಸಮಯಕ್ಕೆ ಮಡಿಕೇರಿಯಿಂದ ಮಂಗಳೂರಿಗೆ ಆಂಬುಲೆನ್ಸ್ ಹೊರಟಿದೆ. 3.20 ಕ್ಕೆ ಆಂಬುಲೆನ್ಸ್ ಸುಳ್ಯ ತಲುಪಲಿದ್ದು, ಸುಳ್ಯದ ಜನತೆ ಜೀರೋ ಟ್ರಾಫಿಕ್ ಮಾಡಿ ಅಂಬ್ಯುಲೆನ್ಸ್ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡಿದ್ದವು. ಇದಕ್ಕೆ ಸ್ಪಂದಿಸಿದ ಸುಳ್ಯದ ಜನತೆ ಅಂಬುಲೆನ್ಸ್ ವಾಹನವು ಸುಳ್ಯಕ್ಕೆ 3.20ಕ್ಕೆ ತಲುಪುತ್ತಿದ್ದಂತೆ ಪೇಟೆಯಲ್ಲಿ ಜೀರೋ ಟ್ರಾಫಿಕ್ ಅನುಕೂಲ ಮಾಡಿಕೊಡುವಲ್ಲಿ ಯಶಸ್ವಿಯಾದರು. ಅಂಬ್ಯುಲೆನ್ಸ್ ಸುಳ್ಯದಲ್ಲಿ ಹೋಗುವ ವೇಳೆ ಸ್ಥಳೀಯರು ಹಿಂದೆ ಮತ್ತು ಮುಂದೆ ಎರಡು ವಾಹನಗಳ ಎಸ್ಕಾರ್ಟ್ ಒದಗಿಸಿ ಸಹಕರಿಸಿದರು.
