
2019 -20 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗುತ್ತಿಗಾರು ಸರಕಾರಿ ಪ್ರೌಢಶಾಲೆ ಗೆ ಪ್ರಥಮ ಸ್ಥಾನ ಗಳಿಸಿದ ಶಿವರಾಮ್ ಕರುವಜೆ ಮತ್ತು ನೀರಜಾ ದಂಪತಿ ಪುತ್ರಿ ಅಖಿಲಾ ಕರುವಜೆ ಇವರನ್ನು ಯುವ ಸ್ಪಂದನ ಟ್ರಸ್ಟ್ ಗುತ್ತಿಗಾರು .ವತಿಯಿಂದ ಫಲಪುಷ್ಪ ಹಾಗೂ ಸ್ಮರಣಿಕೆಯನ್ನು ಹೆತ್ತವರ ಸಮ್ಮುಖದಲ್ಲಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕೆ.ಬಿ ನವೀನ್ ಕುಮಾರ್ , ಉಪಾಧ್ಯಕ್ಷರಾದ ರವೀಶ್ ಮೊಟ್ಟೆ , ಕಾರ್ಯದರ್ಶಿ ಶರತ್ ಎನ್ ಕೆ , ಚರಣ್ ಸಾಯಿ ಮಧುರ, ಚೇತನ್ ಡಿ, ಚಂದ್ರಶೇಖರ್ ಪಾರೆಪ್ಪಾಡಿ , ರಾಜಿತ್ ಎನ್ ಕೆ , ಶಿವರಾಮ್ ಎಂ., ಪ್ರಶಾಂತ್ ಬಾಕಿಲ, ಶ್ರೇಯಸ್ ಮುತ್ಲಾಜೆ ಉಪಸ್ಥಿತರಿದ್ದರು