
ಕಡಬ ತಾಲೂಕು ಪಂಚಾಯತ್ ಅಧ್ಯಕ್ಷ , ಉಪಾಧ್ಯಕ್ಷ ಚುನಾವಣೆ ಆ.14 ರಂದು ದಿನ ನಿಗದಿಯಾಗಿತ್ತು . ಆದರೇ ಕಡಬ ತಾ.ಪಂ. ವ್ಯಾಪ್ತಿಗೆ ಇತ್ತೀಚಿಗೆ ಸೇರ್ಪಡೆಗೊಂಡ ಸುಬ್ರಹ್ಮಣ್ಯ ತಾ.ಪಂ.ಕ್ಷೇತ್ರದ ಸದಸ್ಯ ಅಶೋಕ್ ನೆಕ್ರಾಜೆಯವರ ಪತ್ನಿಗೆ ಕೋವಿಡ್ 19 ಪಾಸಿಟಿವ್ ಧೃಡಪಟ್ಟ ಹಿನ್ನೆಲೆಯಲ್ಲಿ ಕಾರಂಟೈನ್ ಗೊಳಗಾಗಿದ್ದರು. ಅದ್ದರಿಂದ ತನಗೆ ಚುನಾವಣೆ ಯಲ್ಲಿ ಭಾಗವಹಿಸಲು ಅನಾನುಕೂಲವಾಗಿರುವುದರಿಂದ ಚುನಾವಣೆ ಮುಂದೂಡುವಂತೆ ಸಹಾಯಕ ಆಯುಕ್ತರಿಗೆ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿದ ಸಹಾಯಕ ಆಯುಕ್ತರು ಚುನಾವಣೆ ಮುಂದೂಡುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಆದೇಶಿಸಿ ಎಲ್ಲಾ ಸದಸ್ಯರಿಗೆ ತಿಳಿಸುವಂತೆ ಸೂಚಿಸಿದೆ.