
ಶ್ರೀ ಕ್ಷೇ.ಧ.ಗ್ರಾ.ಯೋಜನೆ,ಬಿ.ಸಿ. ಟ್ರಸ್ಟ್ ನಾಲ್ಕೂರು ಇದರ ಆಶ್ರಯದಲ್ಲಿ ಹಾಲೆಮಜಲು ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ಶ್ರೀ ಮುತ್ತಪ್ಪನ್ ಪ್ರಗತಿ ಬಂಧು ಸಂಘ ರಚಿಸಲಾಯಿತು. ನಾಲ್ಕೂರು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ಮೋಹನ್ ಎರ್ದಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ಗುತ್ತಿಗಾರು ವಲಯ ಮೇಲ್ವಿಚಾರಕ ಸುಧೀರ್ ಯೋಜನೆಯ ಕಾರ್ಯಕ್ರಮ ಗಳ ಮಾಹಿತಿ ನೀಡಿ ದಾಖಲಾತಿ ಹಸ್ತಾಂತರಿಸಿದರು. ಒಕ್ಕೂಟದ ಉಪಾಧ್ಯಕ್ಷ ವಿಶ್ವನಾಥ್ ಛತ್ರಪ್ಪಾಡಿ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಹರಿಶ್ಚಂದ್ರ ಕುಳ್ಳಂಪಾಡಿ ಕಾರ್ಯಕ್ರಮ ನಿರೂಪಿಸಿದರು.