
ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸಂಘದ ಕಛೇರಿ ಯಲ್ಲಿ ಆ.13ರಂದು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ದೊಂದಿಗೆ 625/625 ಅಂಕ ಗಳಿಸಿದ ಅನುಷ್ ಎ ಯಲ್ ರವರಿಗೆ ಅಭಿನಂದನಾ ಕಾರ್ಯಕ್ರಮ ಸಂಘದ ಅಧ್ಯಕ್ಷ ರಾದ ಡಾ. ದಾಮೋದರ ನಾರಾಲ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸಂಘದ ಕಾರ್ಯದರ್ಶಿ ಕೆ ರಾಮಣ್ಣ ಗೌಡ ಕೊಂಡೆಬಾಯಿ ಕಾರ್ಯ ಕ್ರಮ ನಿರೂಪಿಸಿದರು. ಸಂಘದ ಹಿರಿಯ ನಿರ್ದೇಶಕ ಲೋಕಯ್ಯ ಗೌಡ ಕೆ ಇವರು ಸನ್ಮಾನಿತರಿಗೆ ಹಿತವಚನ ಹಾಗೂ ಮುಂದಿನ ಭವಿಷ್ಯಕ್ಕೆ ಸಲಹೆ ಸೂಚನೆಗಳನ್ನು ನೀಡಿ ಹರಸಿದರು. ಯುವ ಘಟಕದ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತು ಮಾತನಾಡಿ ನಮ್ಮ ಸಮಾಜಕ್ಕೆ ಕೀರ್ತಿ ತಂದ ಅನುಷ್ ನ ಶೈಕ್ಷಣಿಕ ಜೀವನಕ್ಕೆ ಶುಭ ಹಾರೈಸಿ, ಮುಂದೆ ಉನ್ನತ ಸ್ಥಾನಕ್ಕೆ ಏರುವಂತಾಗಲಿ ಎಂದರು. ಸಂಘದ ಪದಾಧಿಕಾರಿಗಳಾದ ಪುಂಡರಿಕ ಅರಂಬೂರು , ಲಿಂಗಯ್ಯ, ಶ್ರೀಮತಿ ಪೂರ್ಣಿಮಾ, ಸುಕುಮಾರ್ ಯು ಬಿ ಯಸ್, ಗುರುದೇವ ಯು ಬಿ, ಸದಾನಂದ ಗೌಡ ಡಿ ಪಿ ಮತ್ತು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸೌಮ್ಯ ಸುಕುಮಾರ್ , ಕಾರ್ಯದರ್ಶಿ ಶ್ರೀಮತಿ ಸವಿತಾ ಡಿ ಕೆ ,ಯುವ ಘಟಕದ ಕಾರ್ಯದರ್ಶಿ ರಾಘವೇಂದ್ರ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಲಿಂಗಯ್ಯ ಯು ಯಸ್ ಧನ್ಯವಾದ ಅರ್ಪಿಸಿದರು.





