
ದೇವಚಳ್ಳ ಗ್ರಾಮದ ವಾಲ್ತಾಜೆ ಯುವ ಸೇವಾ ಮತ್ತು ಕ್ರೀಡಾ ಸಂಘದ ಸಕ್ರಿಯ ಸದಸ್ಯರಾಗಿದ್ದ ಸೀತಾರಾಮ್ ಮೀನಾಜೆಯವರು ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾಗಿದ್ದರು. ಅವರಿಗೆ ಸಂತಾಪ ಸೂಚಿಸಿದ, ನಂತರ ಸಂಘದ ವತಿಯಿಂದ 50 ಕೆಜಿ ಅಕ್ಕಿ ಮತ್ತು 5000 ರೂ ಧನಸಹಾಯವನ್ನು ಅವರ ಮನೆಗೆ ತೆರಳಿ ಪತ್ನಿ ಲಲಿತ ಮಗಳು ರತಿಕ್ಷಾ ಅವರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ್ ಕಡೋಡಿ, ಅಧ್ಯಕ್ಷ ರಂಜಿತ್ ಕಡ್ಲಾರು, ಕಾರ್ಯದರ್ಶಿ ರುತೇಶ್ ಬಲ್ಕಜೆ, ಸದಸ್ಯರಾದ ಲಿಂಗಪ್ಪ ಮೀನಾಜೆ , ಕೃಷ್ಣ ಕುಮಾರ್ ಪಿಲಿಂಜ, ಚಂದ್ರಶೇಖರ ಚಿದ್ಗಲ್, ಕಮಲಾಕ್ಷ ಚಿದ್ಗಲ್, ಪುರುಷೋತ್ತಮ್ ಕೊರಂಬಡ್ಕ, ವಿನೋದ್ ಕಡ್ಲಾರು, ರಮಿತ್ ಹೆಡ್ಡನ ಮನೆ, ಮನೋಜ್ ಗುಡ್ಡೆ, ಅಶ್ವಥ್ ಕೊರ್ತ್ಯಡ್ಕ, ತುಳಸಿ ಕುಮಾರ್ ಕೊರ್ತ್ಯಡ್ಕ ಕೇಶವ ಕೊರಂಬಡ್ಕ, ವೇಣು ಚಿದ್ಗಲ್, ಪ್ರವೀಣ್ ಮುಂಡೋಡಿ ಉಪಸ್ಥಿತರಿದ್ದರು.