
ಪಾಲ್ತಾಡಿ : ಶ್ರೀ ವಿಷ್ಣು ಮಿತ್ರ ವೃಂದ ಇದರ ಆಶ್ರಯದಲ್ಲಿ 9 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಸರಳವಾಗಿ ಆಚರಿಸಲಾಯಿತು. ಪ್ರತಿ ವರ್ಷ ಮೊಸರು ಕುಡಿಕೆ ಆಚರಣೆ ಅಂಗವಾಗಿ ಪಾಲ್ತಾಡು ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ, ವನಮಹೋತ್ಸವ ಹಮ್ಮಿಕೊಳ್ಳಲಾಯಿತು. ರಾಮಣ್ಣ ನಾಯ್ಕ್ ಕಾಪಿನಕಾಡು ಉದ್ಘಾಟಿಸಿದರು. ಸುಧಾಮ ಮಣಿಯಾಣಿ, ಮಯೂರ ಮಿತ್ರ ವೃಂದದ ಅಮರನಾಥ ರೈ ಬಾಕಿಜಾಲು, ಕುಂಞಿರಾಮ
ಮಣಿಯಾಣಿ, ವಿಷ್ಣು ಮಿತ್ರ ವೃಂದದ ಅಧ್ಯಕ್ಷ ಸುಂದರ ಪಾಲ್ತಾಡು, ಪದಾಧಿಕಾರಿಗಳು ಮೊದಲಾದವರಿದ್ದರು.ಪೃಥ್ವಿರಾಜ್ ಪ್ರಾರ್ಥಿಸಿದರು. ಗಣೇಶ್ ವಂದಿಸಿದರು. ಮನೀಶ್ ಕಾರ್ಯಕ್ರಮ ನಿರೂಪಿಸಿದರು.
