
ಆಗಸ್ಟ್ 10 ರಂದು ಸುಳ್ಯ ಸಿ ಎ ಬ್ಯಾಂಕ್ ನಲ್ಲಿ ಬ್ಯಾಂಕ್ ಸಾಲ ಪಡೆದ ನವೋದಯ ಸ್ವ ಸಂಘ ದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಗಳಿಗೆ ಮಾಹಿತಿ ಮತ್ತು ಬ್ಯಾಂಕ್ ನಿಂದ ನೀಡಲಾದ ಬಡ್ಡಿ ಮನ್ನಾ ದ ಬಗ್ಗೆ ಮಾಹಿತಿ ನೀಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಸಿ ಎ ಬ್ಯಾಂಕ್ ನ ಅಧ್ಯಕ್ಷ ಹರಿಶ್ ಬೂಡುಪನ್ನೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬ್ಯಾಂಕ್ ಉಪಾಧ್ಯಕ್ಷ ವೆಂಕಟ್ರಮಣ ಮುಳ್ಯ ಉಪಸ್ಥಿತರಿದ್ದು ಮಾಹಿತಿ ನೀಡಿದರು. ನಿರ್ದೇಶಕರಾದ ಅಬ್ದುಲ್ ಕುಂಇಿ ನೆಲ್ಯಡ್ಕ ಮತ್ತು ಶೀನಪ್ಪ ಬಯಂಬು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಧ್ಯಕ್ಷ ಹರಿಶ್ ಬೂಡುಪನ್ನೆ ಮಾತನಾಡಿ ಸುಳ್ಯ ಸಿ ಎ ಬ್ಯಾಂಕಿನಲ್ಲಿ ಬಡತನ ರೇಖೆಗಿಂತ ಕೆಳಗಿನ ಸದಸ್ಯರನ್ನೊಳಗೊಂಡ ನವೋದಯ ಸ್ವ ಸಹಾಯ ಸಂಘದ ಸದಸ್ಯರ ಸಂಕಷ್ಟ ಕಾಲದಲ್ಲಿ ನೆರವಾಗುವ ಉದ್ದೇಶದಿಂದ ಬ್ಯಾಂಕ್ ಸಾಲದ ಎರಡು ತಿಂಗಳ ಬಡ್ಡಿ,ಒಟ್ಟು ರೂ 52000/-ಮನ್ನಾ ಮಾಡಲಾಗಿದೆ. ಇದರ ಸದುಪಯೋಗ ಪಡೆದುಕೊಂಡು ಸ್ವ ಸಹಾಯ ಸಂಘದಿಂದ ಮತ್ತು ಬ್ಯಾಂಕಿನಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಸ್ವಾವಲಂಬಿಗಳಾಗಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಲ್ಪವೃಕ್ಷ ನವೊದಯ ಸಂಘದ ಸದಸ್ಯೆ ಯಶೋದ ಪ್ರಾರ್ಥಿಸಿದರು. ನವೋದಯ ಪ್ರೇರಕ ಶ್ರೀಧರ ಮಾಣಿಮರ್ಧು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ ವಂದಿಸಿದರು.