
ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ಇದರ ವತಿಯಿಂದ ಆರಂತೋಡು ವಲಯದ ಜಾಗರಣ ವೇದಿಕೆಯ ಪೆರಾಜೆ ಘಟಕವು ಆ.9 ರಂದು ರ್ಶ್ರೀ ಶಾಸ್ತಾವೇಶ್ವರ ದೇವಸ್ಥಾನ ಪೆರಾಜೆ ಇಲ್ಲಿ ಹಿರಿಯರ ಸಮ್ಮುಖದಲ್ಲಿ ರಚನೆಯಾಯಿತು. ಈ ನೂತನ ಘಟಕದ ಗೌರವಾಧ್ಯಕ್ಷರಾಗಿ ಕೆ.ಸಿ. ಸೀತಾರಾಮ, ಅಧ್ಯಕ್ಷರಾಗಿ ಮನೋಜ್ ಕುಂಠಿಕಾನ, ಉಪಾಧ್ಯಕ್ಷರಾಗಿ ಪ್ರದೀಪ್ ಪೆರಾಜೆ, ಕಾರ್ಯದರ್ಶಿಯಾಗಿ ಭುವನ್ ಕುಂಬಳಚೆರಿ, ಸಂಪರ್ಕ ಪ್ರಮುಖ್ ರಾಗಿ ಸುಭಾಶ್ಚಂದ್ರ ಬಂಗಾರಕೋಡಿ, ಮಾತೃ ಸುರಾಕ್ಷ ಪ್ರಮೋದ್ ಮಜಿಕೊಡಿ, ಪ್ರಚಾರ ಪ್ರಮುಖ್ ರಾಗಿ ವಿನಯ್ ಮೂಲೆಮಜಲು, ಹಿಂದೂ ಯುವವಾಹಿನಿ ಪ್ರಮುಖ್ ರಾಗಿ ಲಿಖಿನ್ ಅಡ್ಕ, ನಿಧಿ ಪ್ರಮುಖ್ ಆಗಿ ದೇವಿಪ್ರಸಾದ್ ಪಾನತ್ತಿಲ ಆಯ್ಕೆಗೊಂಡರು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ಇದರ ಅಧ್ಯಕ್ಷರಾದ ಮಹೇಶ್ ಉಗ್ರಾಣಿಮನೆ, ಪ್ರಧಾನ ಕಾರ್ಯದರ್ಶಿ ಸಂತೋಷ್ ನಾಯಕ್ ಕೊಡಿಯಾಲ , ಪ್ರಚಾರ ಪ್ರಮುಖ್ ಚಂದು ಕೊಡಿಯಾಲ, ಹಾಗೂ ಹಿರಿಯರಾದ ನಾಗೇಶ್ ಕುಂದಲ್ಪಾಡಿ ಉಪಸ್ಥಿತರಿದ್ದರು. ಮಹೇಶ್ ಮೂಲೆಮಜಲು ಕಾರ್ಯಕ್ರಮ ನಿರೂಪಿಸಿದರು.