
ಕಳೆದ 20 ವರ್ಷಗಳಿಂದ ಕ್ರೀಡೆ, ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ಮಹತ್ತರ ಸೇವೆಗೈಯುತ್ತಿರುವ ನ್ಯೂ ಸ್ಟಾರ್ ಆರ್ಟ್ಸ್ & ಸ್ಪೋರ್ಟ್ಸ್ ಅಯ್ಯನಕಟ್ಟೆ ಇದರ 2020-21ನೇ ಸಾಲಿನ ನೂತನ ಸಮಿತಿ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಆಗಸ್ಟ್ 9ರಂದು, ಸಂಸ್ಥೆಯ ಸ್ಥಾಪಕಾಧ್ಯಕ್ಷ ಶರೀಫ್ ಅತ್ತಿಕರಮಜಲುರವರ ಸಾರಥ್ಯದಲ್ಲಿ ನಡೆಯಿತು.
ಸಭೆಯಲ್ಲಿ 2018-19ನೇ ಸಾಲಿನ ಕಾರ್ಯಚಟುವಟಿಕೆಗಳ ಲೆಕ್ಕಾಚಾರ ಮಂಡನೆ ಮಾಡಲಾಯಿತು. ನಂತರ ನೂತನ ಸಮಿತಿ ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಸಮಿತಿಯ ನೂತನ ಅಧ್ಯಕ್ಷರಾಗಿ ಖಾಲಿದ್ ಕಳಂಜ, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಅಯ್ಯನಕಟ್ಟೆ, ಉಪಾಧ್ಯಕ್ಷರಾಗಿ ಅಶ್ರಫ್ ಗೋಳ್ತಡ್ಕ, ಜೊತೆ ಕಾರ್ಯದರ್ಶಿಯಾಗಿ ಮನೋಹರ್ ಪಂಜಿಗಾರು, ಕೋಶಾಧಿಕಾರಿಯಾಗಿ ಅಝೀಝ್ ಗುರಿಕ್ಕಾನ, ಸದಸ್ಯರುಗಳಾಗಿ ತೌಸೀರ್ ಕಳಂಜ, ಆನಂದ ಪಂಜಿಗಾರು ಹಾಗೂ ಜಯಂತ ಪಂಜಿಗಾರು ಆಯ್ಕೆಯಾದರು.