ನಮ್ಮ ದೇಶದ ಬಹುದೊಡ್ಡ ಇಲಾಖೆಗಳಲ್ಲಿ ದೂರಸಂಪರ್ಕ ಇಲಾಖೆಯು ಒಂದು. ದೇಶದಲ್ಲಿ ಕೋಟಿ ಕೋಟಿ ಗ್ರಾಹಕರನ್ನು ಹೊಂದಿರುವಂತಹ ದೊಡ್ಡ ಸಂಸ್ಥೆ, ದೂರಸಂಪರ್ಕ ಇತಿಹಾಸ ನೋಡಿದರೆ ಗ್ರಾಮ ಫೋನು , ಲ್ಯಾಂಡ್ ಲೈನ್ ಫೋನು , ಮೊಬೈಲು ಇತ್ಯಾದಿಗಳೆಲ್ಲವೂ ಕಾಲಕ್ರಮೇಣವಾಗಿ ಬೆಳೆದುಕೊಂಡು ಬಂದಿರುವುದಾಗಿದೆ. ಇತ್ತೀಚಿನ ಒಂದು ವರ್ಷದ ಹಿಂದೆ ತನಕ ಬಿ ಎಸ್ ಎನ್ ಎಲ್ ಅಲ್ಲದೆ ಇನ್ಯಾವುದೇ ಸಂಪರ್ಕದ ಸೇವೆಗಳು ಅಷ್ಟೊಂದು ಉತ್ತಮ ರೀತಿಯಲ್ಲಿ ದೊರೆಯುತ್ತಿರಲಿಲ್ಲ . ಅದರೆ ಈಗ ಪ್ರತಿ ಊರಲ್ಲೂ ಬಿ ಎಸ್ ಎನ್ ಎಲ್ ದೂರ ಸಂಪರ್ಕದ ಕೊರತೆಯಿಂದ ಜನರು ಕಂಗೆಟ್ಟು ಹೋಗಿದ್ದಾರೆ. ಯಾಕೆಂದರೆ ಸರಕಾರವು ಸರಿಯಾದ ಸಲಕರಣೆಗಳ ವ್ಯವಸ್ಥೆ ಮಾಡದೇ ಇದ್ದ ಸಿಬ್ಬಂದಿಗಳನ್ನು ಕೈ ಬಿಟ್ಟು ಕೆಲವೇ ಕೆಲವು ಸಿಬ್ಬಂದಿಗಳು ಮಾತ್ರ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡುಬರುತ್ತಿದೆ. ಕೇಂದ್ರದ ಮಾಜಿ ಸಚಿವ ಸಂಸದ ಆನಂತಕುಮಾರ್ ಹೆಗ್ಗಡೆಯವರು ಬಿ ಎಸ್ ಎನ್ ಎಲ್ ಸಂಸ್ಥೆಯಲ್ಲಿರುವ ಉದ್ಯೋಗಿಗಳನ್ನ ದೇಶದ್ರೋಹಿಗಳೆಂದು ಕರೆಯುವ ಸ್ಥಿತಿಗೆ ಬಂದು ತಲುಪಿದ್ದಾರೆ. ಅಲ್ಲದೆ ಖಾಸಗೀಕರಣ ಮಾಡಲು ತಯಾರಾಗಿದ್ದೇವೆ ಇಂತಹ ಪದೇ ಪದೇ ವಿವಾದತ್ಮಕ ಹೇಳಿಕೆ ನೀಡುತ್ತಿರುವುದನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಗೌಡ ಕೊಯಿಂಗಾಜೆಯವರು ಪತ್ರಿಕಾ ಹೇಳಿಕೆಯನ್ನು ನೀಡಿರುತ್ತಾರೆ
- Tuesday
- December 3rd, 2024