ಬಾಳಿಲ “ಶ್ರೀಕೃಷ್ಣ ಸೇವಾ ಸಮಿತಿ ಬಾಳಿಲ ಮುಪ್ಪೇರ್ಯ ” ಹಾಗು ಅಂಗನವಾಡಿ ಕೇಂದ್ರ ಇದರ ವತಿಯಿಂದ ಏಳನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀಶ ಗಬಲಡ್ಕ ಇವರಿಂದ “ಶ್ರೀಕೃಷ್ಣ ಕಥಾಪ್ರವಚನ” ಹಾಗು ರಾಮಪ್ರಸಾದ್ ಕಾಂಚೋಡು ಇವರಿಂದ ಗಾಯನ ಕಾರ್ಯಕ್ರಮ ನಡೆಯಿತು.
ಶ್ರೀ ಲಕ್ಷ್ಮೀಶ ಗಬಲಡ್ಕ ಮಾತನಾಡುತ್ತಾ ,” ಶ್ರೀಕೃಷ್ಣನ ಅನುಗ್ರಹ ,ಮಾರ್ಗದರ್ಶನ ಇವತ್ತಿಗೆ ಅಗತ್ಯವಾಗಿದೆ.ನಮ್ಮ ಕರ್ತವ್ಯ,ನಮ್ಮ ಧರ್ಮ ಮರೆತುಹೋಗುತ್ತಾ ಇದೆ. ಶ್ರೀ ಕೃಷ್ಣನನ್ನು ನಿಮಿತ್ತವಾಗಿ ಇಟ್ಟುಕೊಂಡು ನಮ್ಮ ಕರ್ತವ್ಯವನ್ನು ನೆನಪಿಸಿಕೊಳ್ಳುವುದು ನಮಗೆ ಅನಿವಾರ್ಯವಾಗಿದೆ.ಕೃಷ್ಣನ ಅನುಗ್ರಹ ಆಗುವ ರೀತಿಯಲ್ಲಿ ನಾವು ಬದುಕಬೇಕು.ಭಾವ ಇದ್ದಲ್ಲಿ ದೇವ , ಭಾವ ಜಾಗೃತಿ ಹಾಗು ದೇವರಲ್ಲಿ ಶರಣಾಗತಿ ಅಗತ್ಯ. ಪೂಜೆ,ಆರಾಧನೆ, ನಮ್ಮ ನಂಬಿಕೆ ಆಚರಣೆಗಳನ್ನು ಮಾಡುತ್ತಾ ನಾವು ಪರಿಣಾಮಿಗಳಾಗಿ ನಮ್ಮ ಪರಿವರ್ತನೆ ಆಗಬೇಕು ಆಗ ಮಾತ್ರ ನಮ್ಮಲ್ಲಿ ಸಾರ್ಥಕತೆ ಇರುವುದು.” ಎಂದರು.
ರಾಮಪ್ರಸಾದ್ ಕಾಂಚೋಡು ಪ್ರಾರ್ಥಿಸಿದರು.ಶ್ರೀಮತಿ ಸರಿತಾ ಕಂಡಿಕಟ್ಟ ಸ್ವಾಗತಿಸಿದರು. ಶ್ರೀಮತಿ ಜಾಹ್ನವಿ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು.