
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮರಕತ ಶ್ರೀ ದುರ್ಗಾ ಭಜನಾ ಮಂಡಳಿ ವತಿಯಿಂದ ನಿವೃತ್ತ ಯೋಧ ಪಡ್ರೆ ಚಿನ್ನಪ್ಪ ಗೌಡರ ಮನೆಯಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ಮಂಡಳಿ ಅಧ್ಯಕ್ಷ ಪ್ರಭಾಕರ್ ಪಡ್ರೆ, ಕಾರ್ಯದರ್ಶಿ ಧರ್ಮಪಾಲ ಚಾರ್ಮತ ಸದಸ್ಯರಾದ ಚಂದ್ರಶೇಖರ ಮಾವಿನಕಟ್ಟೆ, ಚಂದ್ರಶೇಖರ ಬಾಳುಗೋಡು, ಸುಬ್ರಹ್ಮಣ್ಯ ಪಾಲ್ತಾಡು, ವಿಜಯಕುಮಾರ್ ಚಾರ್ಮತ, ಹರಿಶ್ಚಂದ್ರ ಕುಳ್ಳಂಪಾಡಿ, ವಿಶ್ವನಾಥ ಕುತ್ಯಾಳ, ನವೀನ್ ಬಾಳುಗೋಡು, ಸತೀಶ್ ಬೊಂಬುಳಿ, ಸುಬ್ರಹ್ಮಣ್ಯ ಕೊಂಬೆಟ್ಟು, ನಿಶಿತ್ ಮೂರ್ಜೆ, ಆಶ್ಲೇಷ ಪಡ್ರೆ, ಬಾಲಕೃಷ್ಣ ಮರಕತ, ಯನಿತ್ ಪಡ್ರೆ ಉಪಸ್ಥಿತರಿದ್ದರು. ತಬಲದಲ್ಲಿ ಹರೀಶ್ ನಾಯಕ್ ಸುಬ್ರಹ್ಮಣ್ಯ ಮತ್ತು ಜಿ ಸುಬ್ರಹ್ಮಣ್ಯ, ಹಾರ್ಮೋನಿಯಂನಲ್ಲಿ ಕೌಶಿಕ್ ಸಹಕರಿಸಿದರು.