
ಮಳೆಗಾಲದ ಅದ್ಭುತ ಸವಿಯೇ ಹಾಗೆ, ಮನಕೆ ಮುದ ನೀಡುವ ಚೆಲುವಿಕೆ. ವರ್ಷದಾರೆ ಭುವಿಗೆ ತಂಪನ್ನು ನೀಡುವ ಜೊತೆಗೆ ಕಂಗಳಿಗೂ ನಯನಮನೋಹರ ದೃಶ್ಯಾವಳಿ ನೀಡುವುದು. ಭೋರ್ಗರೆದು ಧುಮ್ಮುಕ್ಕುವ ಸ್ಥಳೀಯ ಜಲಪಾತವಾಗಿ ಪ್ರಕೃತಿಯ ಚೆಲುವನ್ನು ಇಮ್ಮಡಿಗೊಳಿಸುವುದು.
ಇಂತಹ ನಯನಮನೋಹರ ಜಲಪಾತ ಸುಳ್ಯ ತಾಲೂಕಿನ ಸೋಣಂಗೇರಿಯಲ್ಲಿದೆ. ಸದ್ಯ ಮಳೆಯ ಪ್ರಮಾಣ ಅಧಿಕವಾಗಿದ್ದು ಜಲಪಾತದ ಅಂದ ಹೆಚ್ಚಾಗಿದೆ.
ಬೆಳ್ಳಾರೆ – ಸುಳ್ಯ ಹೆದ್ದಾರಿ ಬದಿಯಲ್ಲಿ ಕಾಣಬಹುದಾದ ಈ ಜಲಪಾತ ನೋಡುಗರ ಕಣ್ಣಿಗೆ ಮುದನೀಡುತ್ತಿದೆ.