
ಸುರಿಯುತ್ತಿರುವ ಭಾರಿ ಮಳೆಗೆ ಅಡ್ಡಬೈಲು- ಬಸ್ತಿಕಾಡು ಹೊಳೆಯಲ್ಲಿ ಪ್ರವಾಹದ ಜತೆಗೆ ಬಂದು ಕಿರುಸೇತುವೆಯಲ್ಲಿ ಸಿಲುಕಿಕೊಂಡಿದ್ದ ಬೃಹತ್ ಮರದ ತುಂಡುಗಳು, ಕಸಕಡ್ಡಿ ತೆರವುಗೊಳಿಸುವ ಕಾರ್ಯ ಇಂದು ನಡೆಯಿತು. ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡಬೈಲ್ ಸಮೀಪದ ಬೊಳ್ಮಲೆಯಿಂದ ಕೂತ್ಕುಂಜ ಗ್ರಾಮದ ಬಸ್ತಿಕಾಡುವಿಗೆ ಹೋಗುವ ಕಿರುಸೇತುವೆಯಲ್ಲಿ ಕಸಕಡ್ಡಿಗಳು, ಮರದ ದಿಮ್ಮಿಗಳು ನಿಂತು, ನೀರು ಸೇತುವೆ ಮೇಲೆ ಹರಿದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಇದನ್ನು ಗಮನಿಸಿದ ಪಂಜ ಪಂಚಾಯತ್ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು ಕೂಡಲೇ ತೆರವುಗೊಳಿಸಲು ಕ್ರಮಕೈಗೊಂಡಿದ್ದಾರೆ.
