ಹಿಂದೂ ಜಾಗರಣ ವೇದಿಕೆ-ಕಣ್ಕಲ್ ಇದರ ವತಿಯಿಂದ ಕೇನ್ಯ ಗ್ರಾಮದ ಪ್ರಮುಖ ರಸ್ತೆ ಗಳಲ್ಲಿ ಶ್ರಮದಾನ ನಡೆಯಿತು. ಕೇನ್ಯ, ಕಣ್ಕಲ್, ಐನಡ್ಕ, ಬರಮೇಲು,ಪೆಲತ್ತಗಂಡಿ, ಕೆರೆಕ್ಕೋಡಿ, ನೆಲ್ಯಡ್ಕ, ಕಣ್ಕಲ್, ಪೇರ್ಬುಡ, ಗೆಜ್ಜೆ, ಕಾರ್ಯತಡ್ಕ, ಕೇನ್ಯ, ಚಾಲ್ಯಾರು, ಅಡ್ಡಬೈಲುವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಪೊದೆಗಳನ್ನು ಕಡಿಯುವ ಮುಖಾಂತರ ಶ್ರಮದಾನ ಮಾಡಲಾಯಿತು ಮತ್ತು ರಸ್ತೆಯಲ್ಲಿರುವ ಹೊಂಡಕ್ಕೆ ಕಲ್ಲು ಮಿಶ್ರಿತ ಮರಳು ಹಾಕಿ ಶ್ರಮದಾನ ಮಾಡಲಾಯಿತು. ವಾರದಲ್ಲಿ ಒಂದು ದಿನ ಪ್ರತಿ ಆದಿತ್ಯವಾರ ಶ್ರಮದಾನ ಮಾಡಲಾಯಿತು. ಒಟ್ಟು ಎಂಟು ಆದಿತ್ಯವಾರಗಳಂದು ನಡೆದ ಶ್ರಮದಾನದಲ್ಲಿ ಹಿಂ ಜಾ ವೇ ಸದಸ್ಯರಾದ ರಾಜೀವ ಕಣ್ಕಲ್ , ವಾಸುದೇವ ಕೆರೆಕ್ಕೋಡಿ , ರಘುನಾಥ ರೈ , ಸುಬ್ರಹ್ಮಣ್ಯ ಕಣ್ಕಲ್ , ಮಾಧವ ಕಣ್ಕಲ್ , ವಾಸುದೇವ ಆನೆಮನೆ , ದೇವಿಪ್ರಸಾದ್ ಆನೆಮನೆ , ಕಾರ್ತಿಕ್ ಕಣ್ಕಲ್ , ಪ್ರವೀಣ್ ಗೆಜ್ಜೆ , ಸುನಿಲ್ ಕಣ್ಕಲ್ , ಸುಂದರ ಗೌಡ , ಹೃಥ್ವಿಕ್ ಕಣ್ಕಲ್, ಪದ್ಮನಾಭ ಕೆರೆಕ್ಕೋಡಿ , ಸೀತಾರಾಮ ಪೇರಂಬುಡ , ಕೇಶವ ಕೆರೆಕ್ಕೊಡಿ , ಲೋಕೇಶ್ ಕೆರೆಕ್ಕೋಡಿ . ಉಮೇಶ್ , ಮಾಯಿಲಪ್ಪ ಕೆರೆಕ್ಕೋಡಿ . ಹೊನ್ನಪ್ಪ ಕೆರೆಕ್ಕೋಡಿ , ಪುನೀತ್ ಕೆಮ್ಮಟೆ , ಸದಾನಂದ ಕೆರೆಕ್ಕೋಡಿ , ಗೋಪಾಲ ಕಾಪು , ಹರೀಶ್ ಕಣ್ಕಲ್ , ವಸಂತ ಬಲ್ಯ , ಕೇಶವ ಕಣ್ಣಲ್ , ಲಿಂಗಪ್ಪ ಕೆಮ್ಮಟೆ, ಲಿಖಿನ್ ಹಾಗೂ ವಿನ್ಯಾಸ ರೈ ಕೇನ್ಯ , ಅರುಣ್ ರೈ ಗೆಜ್ಜೆ ಬಾಲಕೃಷ್ಣ ಕಾಪು , ರಾಮಚಂದ್ರ ಕೆರೆಕ್ಕೋಡಿ , ವಿನೋದ್ ಪೂಜಾರಿ , ಧರ್ಣಪ್ಪ ಕಣ್ಕಲ್ ಮತ್ತಿತರರು ಇದ್ದರು .
- Thursday
- November 21st, 2024