
ಜಾಲ್ಸೂರು ಎಸ್ಎಸ್ಎಫ್ ಸೆಕ್ಟರ್ ವತಿಯಿಂದ ರಕ್ತದಾನ ಶಿಬಿರ ಆ.9ರಂದು ಸುಣ್ಣ ಮೂಲೆ ಮದ್ರಸ ವಠಾರದಲ್ಲಿ ನಡೆಯಿತು.
ಶಿಬಿರದಲ್ಲಿ ಹಸ್ಸನ್ ಸುಣ್ಣಮೂಲೆ, ಹುಸೇನ್ ಸುಣ್ಣಮೂಲೆ, ಸ್ಥಳೀಯ ಗ್ರಾಪಂ ಮಾಜಿ ಸದಸ್ಯ ಮಹಮ್ಮದ್ ಫವಾಝ್, ಸೆಕ್ಟರ್ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರುಗಳು ಉಪಸ್ಥಿತರಿದ್ದರು. ಶಿಬಿರದಲ್ಲಿ ವಿಶೇಷವಾಗಿ ಮುಸ್ಲಿಂ ಮಹಿಳೆಯರು ರಕ್ತದಾನ ಮಾಡಿ ಸಹಕರಿಸಿದರು.