Ad Widget

ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ತುಂಬಿ ಹರಿಯುತ್ತಿರುವ ನದಿಗಳು, ಕೆಲವೆಡೆ ಹಾನಿ

ಸುಳ್ಯ ತಾಲೂಕಿನಲ್ಲಿ ನಿನ್ನೆ ರಾತ್ರಿಯಿಂದ ಸುರಿದ ಭಾರಿ ಮಳೆಗೆ ತಾಲೂಕಿನಾದ್ಯಂತ ನದಿ, ಹೊಳೆ ತುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ಸುಳ್ಯದ ಪಯಸ್ವಿನಿ ನದಿ ಕೂಡ ಅಪಾಯದ ಮಟ್ಟಮೀರಿ ಹರಿಯುತ್ತಿದ್ದು ತಗ್ಗು ಪ್ರದೇಶಗಳಿಗೆ, ತೋಟಗಳಿಗೆ ನೀರು ನುಗ್ಗಿದೆ.
ಕಲ್ಲುಗುಂಡಿಯ ಕಡೆಪಾಲದ ಬಳಿ ಬರೆ ಕುಸಿದು ರಸ್ತೆಗೆ ಮರ ಬಿದ್ದಿದ್ದನ್ನು ಅಗ್ನಿಶಾಮಕ ದಳ ತೆರವುಗೊಳಿಸಿದೆ. ಅನೆಗುಂಡಿ ಬಳಿ ಬರೆಕುಸಿದಿದೆ, ಕುಕ್ಕಂದೂರು ಸಮೀಪ ಬರೆ ಕುಸಿದಿದೆ.
ಕಾಡುಸೊರಂಜ ದಯಾನಂದ ಅವರ ಮನೆ ಸಮೀಪ ವಿದ್ಯುತ್ ಲೈನ್ ಮೇಲೆ ಮರ ಬಿದ್ದಿದೆ. ಕಾಡುಸೊರಂಜ ಸುಂದರ , ಪುರುಷೋತ್ತಮ ಅವರ ತೋಟಕ್ಕೆ ನೀರು ನುಗ್ಗಿದೆ. ಪೈಚಾರ್ ಮಸೀದಿ ಸಮೀಪ ಬರೆ ಕುಸಿದಿದ್ದು ಮನೆಗೆ ಹಾನಿ ಸಂಭವಿಸಿದೆ.

. . . . . . .

ಕಡೆಪಾಲ

ಪಂಜಿಕಲ್ ಸೇತುವೆ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!