
ಸುಳ್ಯ ನಗರದ ಕೆಲವು ಭಾಗಗಳಲ್ಲಿ ಬರೆಕುಸಿತ ಉಂಟಾಗುತ್ತಿದ್ದು ಜನರು ಆತಂಕದಲ್ಲಿದ್ದಾರೆ. ಕಳೆದ ಮೂರು ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಸುಳ್ಯ ತಾಲೂಕಿನಾದ್ಯಂತ ಜನರಲ್ಲಿ ಆತಂಕದ ಛಾಯೆ ಮೂಡಿದೆ. ಒಂದೆಡೆ ಕೊರೋನಾ ಮಹಾಮಾರಿಯು ಸುಳ್ಯವನ್ನು ಕಾಡುತ್ತಿದ್ದರೆ ಮತ್ತೊಂದೆಡೆ ಮಳೆಯು ತನ್ನ ರುದ್ರ ನರ್ತನದಿಂದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
