ಸುಳ್ಯ ಕಾರು ಚಾಲಕ ಮಾಲಕ ಸಂಘದ ಸಭೆಯು ಸುಳ್ಯದ ದ್ವಾರಕಾ ಹೋಟೆಲ್ ಕಟ್ಟಡದಲ್ಲಿ ಅಗಸ್ಟ್ 3ರಂದು ನಡೆಯಿತು . ಸಭೆಯ ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷರಾದ ಯಂ ಬಿ ಸದಾಶಿವ ವಹಿಸಿದ್ದರು . ಸಂಘದ ಕಾನೂನು ಸಲಹೆಗಾರರಾದ ವಕೀಲರಾದ ಯಂ ವೆಂಕಪ್ಪ ಗೌಡ , ಸಮಿತಿಯ ಅಧ್ಯಕ್ಷ ಜಯಂತ ಹರ್ಲಡ್ಕ ಜೊತೆ ಕಾರ್ಯದರ್ಶಿ ದಾಮೋದರ್ ಅಡ್ಕರ್ ಹಾಗು ಪದಾದಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು .
ಇತ್ತೀಚಿನ ಕೆಲವು ತಿಂಗಳುಗಳಿಂದ ಕೊರೋನಾ ಸಂಕಷ್ಕಕ್ಕೆ ವಾಹನ ಚಾಲಕ ಮಾಲಕರು ಒಳಗಾಗಿದ್ದು ಯಾರು ಧೃತಿಗೆಡಬಾರದು ಮತ್ತು ಒಬ್ಬರಿಗೊಬ್ಬರು ಸಹಕಾರ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಸಭೆಯಲ್ಲಿ ಅಭಿಪ್ರಾಯಿಸಲಾಯಿತು. ಅಲ್ಲದೆ ವ್ಯಾನ್ ಓಡಾಟ ವಿಚಾರದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲಾಯಿತು .
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು ಸದಸ್ಯರುಗಳು ಉಪಸ್ಥಿತರಿದ್ದು ಲಾಕ್ ಡೌನ್ ಸಮಯದಲ್ಲಿ ಉಂಟಾದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.