Ad Widget

ರಾಮ ಮಂದಿರದ ಭೂಮಿಪೂಜೆಯ ಸಮಾರಂಭವನ್ನು ಉತ್ಸಾಹ ಮತ್ತು ಆನಂದದಿಂದ ಆಚರಿಸಿ, ಜತೆಗೆ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿ : ಸನಾತನ ಸಂಸ್ಥೆ

ರಾಮಜನ್ಮಭೂಮಿಯು ೫೦೦ ವರ್ಷಗಳಿಂದ ರಾಮ ಮಂದಿರ ನಿರ್ಮಾಣಕ್ಕಾಗಿ ಕಾಯುತ್ತಿದೆ. ದೈವೀ ಆಯೋಜನೆಯಂತೆ ಆ ಪರಮಾನಂದದ ಕ್ಷಣವು ಸಮೀಪಿಸಿದೆ. ನಮಗೆ ಈ ಭವ್ಯ ಮತ್ತು ಈಶ್ವರಿ ಕಾರ್ಯದಲ್ಲಿ ಪಾಲ್ಗೊಳ್ಳುವ ಸುವರ್ಣಾವಕಾಶ ಸಿಗುತ್ತಿದೆ, ಅದಕ್ಕಾಗಿ ಈ ಐತಿಹಾಸಿಕ ಕ್ಷಣವನ್ನು ಉತ್ಸಾಹದಿಂದ ಮತ್ತು ಆನಂದದಿಂದ ಆದರೆ ಕರೋನಾ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಸರಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಆಚರಿಸಿರಿ. ಈ ಭೂಮಿ ಪೂಜೆ ಸಮಾರಂಭವನ್ನು ರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲು ಪ್ರತಿಯೊಬ್ಬ ರಾಮಭಕ್ತನು ಈ ಮುಂದಿನ ಕೃತಿಗಳನ್ನು ಮಾಡಬೇಕು,

. . . . .

೧. ಪ್ರತಿಯೊಬ್ಬ ಹಿಂದೂ ತನ್ನ ಮನೆಯ ಮೇಲೆ ಕೇಸರಿ ಧ್ವಜವನ್ನು ಹಾರಿಸಬೇಕು !
೨. ಶ್ರೀರಾಮತತ್ತ್ವದ ಸಾತ್ತ್ವಿಕ ರಂಗೋಲಿಯನ್ನು ಮನೆಯ ಮುಂದೆ ಬಿಡಿಸಬೇಕು !
೩. ಬೆಳಗ್ಗೆ ಶ್ರೀರಾಮನನ್ನು ಪೂಜಿಸುವಾಗ ಎಣ್ಣೆ ದೀಪ ಬೆಳಗಬೇಕು ಮತ್ತು ಸಂಜೆ ಬಾಗಿಲಿನ ಬಳಿ ಹಣತೆಯನ್ನು ಹಚ್ಚಬೇಕು !
೪. ಕುಟುಂಬದವರೆಲ್ಲ ಸೇರಿ ಸಾಮೂಹಿಕವಾಗಿ ಶ್ರೀರಾಮರಾಕ್ಷಾಸ್ತೋತ್ರವನ್ನು ಪಠಿಸಬೇಕು !
೫. ಪ್ರತಿಯೊಬ್ಬರೂ ದಿನವಿಡೀ ಸಾಧ್ಯವಾದಷ್ಟು ’ಶ್ರೀರಾಮ ಜಯ ರಾಮ ಜಯ ಜಯ ರಾಮ’ ಎಂದು ನಾಮಜಪ ಮಾಡಬೇಕು !
೬. ‘ಶ್ರೀರಾಮನಿಗೆ ಅಪೇಕ್ಷಿತವಿರುವ ಆದರ್ಶ ರಾಮರಾಜ್ಯವು ಶೀಘ್ರದಲ್ಲೇ ಸ್ಥಾಪನೆಯಾಗಲಿ’ ಎಂದು ಶ್ರೀ ರಾಮನಲ್ಲಿ ಭಾವಪೂರ್ಣವಾಗಿ ಪ್ರಾರ್ಥನೆ ಮಾಡಬೇಕು !

ಹೀಗೆ ವಿವಿಧ ಕಾರ್ಯಗಳ ಮೂಲಕ ಶ್ರೀರಾಮನ ಭಕ್ತಿಯನ್ನು ಮಾಡಿ ಪ್ರಭು ಶ್ರೀರಾಮನ ಕೃಪೆಯನ್ನು ಸಂಪಾದಿಸಬೇಕೆಂದು ಸನಾತನ ಸಂಸ್ಥೆಯು ಹಿಂದೂ ಸಮಾಜಕ್ಕೆ ಕರೆ ನೀಡಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!