Ad Widget

ಆರ್ ಟಿ ಇ ಮೂಲಕ ದಾಖಲಾತಿ ಪಡೆದ ವಿದ್ಯಾರ್ಥಿಗಳಿಂದ ಹಣ ವಸೂಲಿಗಿಳಿದ ಶಿಕ್ಷಣಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ

ಸುಳ್ಯ ತಾಲೂಕಿನ ಕೆಲವು ಖಾಸಗಿ ಶಾಲಾ ಆಡಳಿತ ಮಂಡಳಿಯು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಬಡಕುಟುಂಬದ ಉತ್ತಮ ಶಿಕ್ಷಣಕ್ಕಾಗಿ ಜಾರಿಗೊಳಿಸಿದ ಆರ್.ಟಿ.ಇ(ಕಡ್ಡಾಯ ಶಿಕ್ಷಣ ಕಾಯ್ದೆ)ಯೋಜನೆ ಮೂಲಕ ದಾಖಲಾದ ವಿದ್ಯಾರ್ಥಿಗಳ ಪೋಷಕರಿಂದ ಪುಸ್ತಕದ ಶುಲ್ಕವು ವಸೂಲಿ ಮಾಡುತ್ತಿದೆ.ಸರಕಾರದ ಆದೇಶದಂತೆ ಯಾವುದೇ ಶುಲ್ಕವು ಪಾವತಿಸಬೇಕಾಗಿಲ್ಲ.ಆದರೆ ಪಠ್ಯಪುಸ್ತಕಕ್ಕೆ ಶುಲ್ಕ ಪಾವತಿಸದೇ ಪುಸ್ತಕವು ನೀಡುವುದಿಲ್ಲ.ಇದೀಗ ‘ಆನ್ ಲೈನ್’ಮೂಲಕ ತರಗತಿ ಆರಂಭಗೊಂಡಿದೆ. ಪಠ್ಯಪುಸ್ತಕ ಖರೀದಿಸಲಾಗದ ಬಡ ವಿದ್ಯಾರ್ಥಿಗಳ ಶಿಕ್ಷಣವು ಅತಂತ್ರ ಸ್ಥಿತಿಯಾಗಿದೆ.ಈ ಯೋಜನೆಯು ಸಂಪೂರ್ಣ ದುರುಪಯೋಗವಾಗುತ್ತಿದೆ. ಕೊರೋನ ಮಹಾಮರಿಯ ಸಂಕಷ್ಟದ ಸಮಯದಲ್ಲಿ ಆರ್ಥಿಕವಾಗಿ ಹಿಂದುಳಿದ,ಯಾವುದೇ ಆದಾಯವಿಲ್ಲದ ಕುಟುಂಬದ ಆರ್.ಟಿ.ಇ ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೇಕಾಗುವ ಪಠ್ಯಪುಸ್ತಕ ಶುಲ್ಕ ಪಾವತಿಸಲು ಅಸಮರ್ಥರಾಗಿದ್ದಾರೆ.ಕೆಲ ವಿದ್ಯಾರ್ಥಿಗಳ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತವಾಗಿ ದೂರು ಸಲ್ಲಿಸಿರುತ್ತಾರೆ.
ಬಡವರ ಪರ,ನ್ಯಾಯದ ಪರವಾಗಿ ಉಸ್ತುವಾರಿ ಸಚಿವರು ಕೋಟ ಶ್ರೀನಿವಾಸ ಪೂಜಾರಿಯವರು ಬಡವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ರಂಜಿತ್ ಪೂಜಾರಿಯವರು ಸಚಿವರಿಗೆ ಮನವಿಯನ್ನು ನೀಡಿರುತ್ತಾರೆ.

. . . . . . .

ರಂಜಿತ್ ಪೂಜಾರಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!