ಸುಂಟಿಕೊಪ್ಪ ಗ್ರಾಮ ಪಂಚಾಯತಿಯಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಬಾಲಚಂದ್ರ ಸ್ನೇಕ್ ಬಾಲನ್ ಎಂದೇ ಖ್ಯಾತಿಯನ್ನು ಪಡೆದುಕೊಂಡಿರುವ ಇವರು ಕಳೆದ 14 ವರ್ಷಗಳಿಂದ ಈ ಕಾಯಕವನ್ನು ಮಾಡುತ್ತಿದ್ದಾರೆ. ಉರಗಗಳ ಮೇಲೆ ಇಟ್ಟಿರುವ ಇವರ ಅಪಾರ ಪ್ರೀತಿ ಇಂದು ಸುಂಟಿಕೊಪ್ಪ ದ ಪರಿಸರದ ಜನತೆಗೆ ವರವಾಗಿದೆ. ಇಲ್ಲಿಯವರೆಗೆ ಸುಮಾರು 200 ಉರಗಗಳನ್ನು ಸಂರಕ್ಷಿಸಿರುವ ಇವರು ಸ್ಥಳೀಯ ಕಾಡುಗಳಲ್ಲಿ ಅವುಗಳನ್ನು ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಇವರು ತಮ್ಮ ವಾಟ್ಸಪ್ ನಂಬರ್ ನಲ್ಲಿ ಯಾರೇ ಎಲ್ಲಿಯೇ ಅವುಗಳನ್ನು ಕಂಡಲ್ಲಿ ದಯವಿಟ್ಟು ಅದನ್ನು ನೋಯಿಸಬೇಡಿ ನನ್ನ ನಂಬರಿಗೆ ಮಾಹಿತಿ ನೀಡಿ ಎಂದು ಮಾನವೀಯತೆಯನ್ನು ಮೆರೆಯುತ್ತಾರೆ. ಇವರ ನಿಸ್ವಾರ್ಥ ಸೇವೆಗೆ ಪ್ರತಿಯೊಬ್ಬರು ಇವರನ್ನು ಶ್ಲಾಘಿಸುತ್ತಾರೆ. ತಾನು ಒಬ್ಬ ಪೌರ ಕಾರ್ಮಿಕರಾಗಿದ್ದರು ಸ್ಥಳೀಯ ಪರಿಸರದ ಜನತೆಯ ಕಾಳಜಿ ವಹಿಸಿಕೊಂಡಿರುವುದು ಮೆಚ್ಚುಗೆ ಪಡುವಂತಾಗಿದೆ. ಇವರ ಉರಗ ಪ್ರೇಮ ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ನಡೆಯಲಿ ಸಮಾಜದ ಇತರರಿಗೂ ಇವರ ಧೈರ್ಯ ಮತ್ತು ಪರಿಸರ ಪ್ರೇಮ ಬೆಳಗಲಿ.
- Friday
- November 22nd, 2024