Ad Widget

ಹಿಂದು ಜಾಗರಣ ವೇದಿಕೆ ತಾಲೂಕು ಸಮಿತಿ ರಚನೆ- ಅಧ್ಯಕ್ಷರಾಗಿ ಮಹೇಶ್ ಉಗ್ರಾಣಿಮನೆ,ಪ್ರ.ಕಾರ್ಯದರ್ಶಿ ಸಂತೋಷ್ ಕೊಡಿಯಾಲ

ಹಿಂದು ಜಾಗರಣ ವೇದಿಕೆ ಸುಳ್ಯ ತಾಲೂಕು ಇದರ ನೂತನ ತಾಲೂಕು ಸಮಿತಿಯು ಆ. 3 ರಂದು ಗಾಂಧಿನಗರದ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ರಚನೆಯಾಯಿತು. ಈ ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ರಾಜೇಶ್ ಭಟ್ ನೆಕ್ಕಿಲ, ಅಧ್ಯಕ್ಷರಾಗಿ ಮಹೇಶ್ ಉಗ್ರಾಣಿಮನೆ, ಉಪಾಧ್ಯಕ್ಷರಾಗಿ ಪ್ರಶಾಂತ್ ಕಾಯರ್ತೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ನಾಯಕ್ ಕೊಡಿಯಾಲ, ಕಾರ್ಯದರ್ಶಿಗಳಾಗಿ ಗಣೇಶ್ ಮಂಡೆಕೋಲು, ಸಂದೀಪ್ ರೈ ಉಬರಡ್ಕ, ಹರೀಶ್ ಪೇರಾಜೆ ಇವರುಗಳು ಹಾಗೂ ಸಂಪರ್ಕ ಪ್ರಮುಖರಾಗಿ ದೀಕ್ಷಿತ್ ಕುಕ್ಕೆಟ್ಟಿ, ಪ್ರಚಾರ ಪ್ರಮುಖರಾಗಿ ಚಂದು ಕೊಡಿಯಾಲ, ನಿಧಿ ಪ್ರಮುಖರಾಗಿ ಶರತ್ ಅಡ್ಯಡ್ಕ, ಮಾತೃ ಸುರಕ್ಷಾ ಸಂಯೋಜಕರಾಗಿ ಜನಾರ್ಧನ ಪಂಜ, ಹಿಂದು ಯುವ ವಾಹಿನಿ ಸoಯೋಜಕರಾಗಿ ನಿಶಿತ್ ನಡುಗಲ್ಲು ಇವರುಗಳು ಆಯ್ಕೆಯಾದರು. ಈ ಸಂದರ್ಭದಲ್ಲಿ ರವಿರಾಜ್ ಶೆಟ್ಟಿ ಕಡಬ ಪ್ರಾಂತ ಸಂಪರ್ಕ ಪ್ರಮುಖ್ ಕರ್ನಾಟಕ ದಕ್ಷಿಣ ಪ್ರಾಂತ, ಜಗದೀಶ್ ನೆತ್ತರಕೆರೆ
ಅಧ್ಯಕ್ಷರು ಪುತ್ತೂರು ಜಿಲ್ಲೆ, ನರಸಿಂಹ ಮಾಣಿ
ಸಂಪರ್ಕ ಪ್ರಮುಖ್ ಪುತ್ತೂರು ಜಿಲ್ಲೆ, ಅಜಿತ್ ಹೊಸಮನೆ
ಪ್ರಧಾನ ಕಾರ್ಯದರ್ಶಿ ಪುತ್ತೂರು ಜಿಲ್ಲೆ, ವೆಂಕಟ್ ಕಡಬ
ಉಪಾಧ್ಯಕ್ಷರು ಪುತ್ತೂರು ಜಿಲ್ಲೆ, ಚಿನ್ಮಯ್ ಈಶ್ವರಮಂಗಲ
ಸಂಘಟನಾ ಕಾರ್ಯದರ್ಶಿ ಪುತ್ತೂರು ಜಿಲ್ಲೆ, ಚಂದ್ರ ಕುಳಾಯಿ ಕಾರ್ಯದರ್ಶಿ ಪುತ್ತೂರು ಜಿಲ್ಲೆ, ಪ್ರಶಾಂತ್ ಬಿಸಿ ರೋಡ್ ಜಿಲ್ಲಾ ಸoಯೋಜಕ್ ಹಿಂದು ಯುವ ವಾಹಿನಿ ಪುತ್ತೂರು ಜಿಲ್ಲೆ, ಹರೀಶ್ ಪೆರಾಜೆ ಬಿಸಿರೋಡ್, ಜಯಂತ್ ಮಡಪ್ಪಾಡಿ, ಮಹೇಶ್ ರೈ ಮೇನಾಲ, ಸುರೇಶ್ ಕಣೆಮರಡ್ಕ,ಸುನಿಲ್ ಕೇರ್ಪಳ ಉಪಸ್ಥಿತರಿದ್ದರು. ದಾಮೋದರ್ ಮಂಚಿ ಕಾರ್ಯಕ್ರಮವನ್ನು ನಿರೂಪಿಸಿದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!