ಕೊರೊನ ಮಹಾಮಾರಿ ಖಾಯಿಲೆಯಿಂದ ಹಾಗೂ ಲಾಕ್ ಡೌನ್ ಜಾರಿಯಲ್ಲಿದ್ದುದರಿಂದ ಕರ್ನಾಟಕ ಕೇರಳ ಗಡಿ ಭಾಗದ ರಸ್ತೆಗಳು ಸಂಪೂರ್ಣ ಬಂದ್ ಆಗಿರುವುದರಿಂದ ಸಾರ್ವಜನಿಕರಿಗೆ ಸಂಚರಿಸಲು ಸಮಸ್ಯೆಯಾಗುತ್ತಿದ್ದು ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು, ಹಾಕಿರುವ ಮಣ್ಣನ್ನೂ , ಗೇಟ್ ತೆರೆದು ಸಾರ್ವಜನಿಕರಿಗೆ ಸಂಚರಿಸಲು ಅವಕಾಶ ಮಾಡಿಕೊಡಬೇಕೆಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ತಾಲೂಕು ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಉಪ ತಹಶೀಲ್ದಾರ್ ರ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಅದ್ಯಕ್ಷರಾದ ಜಯಪ್ರಕಾಶ್ ರೈ , ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ , ವಕ್ತಾರರಾದ ನಂದರಾಜ ಸಂಕೇಶ , ಮಾಧ್ಯಮ ಸಂಯೋಜಕರಾದ ಭವಾನಿಶಂಕರ ಕಲ್ಮಡ್ಕ , ಉಪಾಧ್ಯಕ್ಷರಾದ ಸತ್ಯಕುಮಾರ್ ಅಡಿಂಜ , ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶಶಿಧರ ಎಂ ಜೆ , ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾದ್ಯಕ್ಷರಾದ ಮುಸಾ ಪಿ ಎಂ , ರಜಾಕ್ ಉಪಸ್ಥಿತರಿದ್ದರು
- Friday
- November 15th, 2024