ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ (ಭೂಮಿ ಪೂಜಾ) ಕಾರ್ಯಕ್ರಮ ಇರುವುದರಿಂದ ಸಾರ್ವಜನಿಕರು ಯಾವುದೇ ರೀತಿಯ ಅತಿರೇಕಕ್ಕೆ ಒಳಗಾಗಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಸನ್ನಿವೇಶಕ್ಕೆ ಮುಂದಾಗಬಾರದು ಎಂದು ಇಂದು ಸಂಜೆ ಸುಳ್ಯದಲ್ಲಿ ನಡೆದ ಶಾಂತಿ ಸಭೆಯಲ್ಲಿ ವಿವಿಧ ಧರ್ಮದ ಮುಖಂಡರು ಮತ್ತು ರಾಜಕೀಯ ನೇತಾರರನ್ನು ಉದ್ದೇಶಿಸಿ ಸುಳ್ಯ ವೃತ್ತ ನಿರೀಕ್ಷಕ ನವೀನಚಂದ್ರ ಜೋಗಿ ರವರು ಮಾತನಾಡಿದರು.ತಾಲೂಕಿನ ದೇವಸ್ಥಾನ ಭಜನಾ ಮಂದಿರಗಳಲ್ಲಿ ಹಾಗೂ ತಮ್ಮ ಮನೆಗಳಲ್ಲಿ ಪೂಜೆ ಮಾಡುವ ಮೂಲಕ ಸಂಭ್ರಮಾಚರಣೆಯನ್ನು ಆಚರಿಸಿ ಕೊಳ್ಳಬಹುದು. ಆದರೆ ಸರ್ಕಾರದ ನಿಯಮಕ್ಕನುಗುಣವಾಗಿ ಕೇವಲ 50 ಮಂದಿ ಮಾತ್ರ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾಗಿದೆ.ಸಾಮಾಜಿಕ ಅಂತರವನ್ನು ಪಾಲಿಸಿ ಸ್ಯಾನಿಟೈಸರ್ ಗಳನ್ನು ಬಳಸಿ ಸಮಾಜದ ಆರೋಗ್ಯ ದೃಷ್ಟಿಯನ್ನು ಕೂಡ ಕಾಪಾಡಿಕೊಳ್ಳಬೇಕಾಗಿದೆ. ಆ ದಿನ ದಂದು ರ್ಯಾಲಿಯನ್ನು ಮಾಡುವುದಾಗಲಿ ,ಪಟಾಕಿ ಹೊಡೆಯುವುದು, ವಾಹನಗಳಿಗೆ ಧ್ವಜಗಳನ್ನು ಕಟ್ಟಿ ಸುತ್ತಾಡುವುದು, ಬ್ಯಾನರುಗಳನ್ನು ಬಳಸುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದ ಸುಳ್ಯ ಠಾಣಾ ಉಪ ನಿರೀಕ್ಷಕ ಹರೀಶ್ ಎಂ ಆರ್ ಒಬ್ಬ ಕಿಡಿಗೇಡಿ ಯಿಂದ ಇಡೀ ಸಮಾಜವೇ ಹಾಳಾಗಲು ಸಾಧ್ಯವಿದೆ. ಬಸವಣ್ಣನವರ ವಚನದಂತೆ ದಯೆಯೇ ಧರ್ಮದ ಮೂಲ ಎಲ್ಲಾ ಧರ್ಮದಲ್ಲಿಯೂ ಕೂಡ ದಯೆಗೆ ಹೆಚ್ಚು ಸ್ಥಾನವನ್ನು ನೀಡಲಾಗಿದೆ.ಬೇರೆಯವರ ಮನಸ್ಸನ್ನು ನೋಯಿಸಿ ಸಂಭ್ರಮಾಚರಣೆ ಮಾಡುವುದು ಅದು ನಿಜವಾದ ಸಂಭ್ರಮಾಚರಣೆ ಆಗಲು ಸಾಧ್ಯವಿಲ್ಲ. ತಮ್ಮ ತಮ್ಮ ದೇವರುಗಳು ಮೆಚ್ಚುವ ರೀತಿಯಲ್ಲಿ ಪೂಜೆ-ಪುನಸ್ಕಾರಗಳನ್ನು ಮಾಡಿ ಸಮಾಜದ ಶಾಂತಿಯನ್ನು ಮುಂದುವರಿಸಬೇಕಾಗಿದೆ. ಶಾಂತಿಯುತ ಸುಳ್ಯ ಮುಂದೆಯೂ ಶಾಂತಿಯುತವಾಗಿ ಮುಂದುವರಿಯಬೇಕಾಗಿದೆ.ಪೊಲೀಸ್ ಇಲಾಖೆಗೆ ನಿಮ್ಮೆಲ್ಲರ ಸಹಕಾರದ ಅವಶ್ಯಕತೆ ಇದೆ. ನಾವು ಮಾಡುವ ಕೆಲಸದಿಂದ ಸಮಾಜಕ್ಕೆ ಅಶಾಂತಿ ಉಂಟಾಗುವ ಯಾವುದೇ ಕೆಲಸ ಆಗದ ರೀತಿಯಲ್ಲಿ ಮುಖಂಡರುಗಳು ಮತ್ತು ಆಯಾ ಧರ್ಮದ ನೇತಾರರು ಸಮಾಜವನ್ನು ಎಚ್ಚರಿಸಬೇಕಾಗಿದೆ ಎಂದು ಹೇಳಿದರು .
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಪಿಎಸ್ ಗಂಗಾಧರ್, ಸಿದ್ಧೀಕ್ ಕೊಕೊ, ಎಸ್ಡಿಪಿಐ ಪಕ್ಷದಿಂದ ಅಬ್ದುಲ್ ಕಲಾಂ, ಮುಸ್ತಫ ದರ್ಜಿ, ಬಿಜೆಪಿ ಪಕ್ಷದ ಮುಖಂಡರುಗಳಾದ ಹರೀಶ್ ರೈ ಉಬರಡ್ಕ, ರಂಜಿತ್ ಪೂಜಾರಿ, ಬಜರಂಗದಳದ ಕಾರ್ಯಕರ್ತರಾದ ಸನತ್ ಚೊಕ್ಕಾಡಿ, ನವೀನ್ ಎಲಿಮಲೆ, ವಿಘ್ನೇಶ್ ಆಚಾರ್ಯ, ನ.ಪಂ ಸದಸ್ಯ ರಿಯಾಝ್ ಕಟ್ಟೆ ಕಾರ್, ತೀರ್ಥ ಕುಮಾರ್ ಕುಡೆಕಲ್ಲು, ಫಯಾಜ್, ಮುತ್ತಲಿಬ್, ಮೊದಲಾದವರು ಉಪಸ್ಥಿತರಿದ್ದರು.
- Thursday
- November 21st, 2024