Ad Widget

ಕೊಡಗಿನಲ್ಲಿ 41 ಹೊಸ ಕೋವಿಡ್ ಪ್ರಕರಣ ಪತ್ತೆ

ಕೊಡಗು ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 15 ಹೊಸ ಕೋವಿಡ್ ಪ್ರಕರಣಗಳು ಮತ್ತು  ಮಧ್ಯಾಹ್ನ 1.30 ರ ವೇಳೆಗೆ 26 ಹೊಸ ಕೋವಿಡ್-19 ಪ್ರಕರಣ ಸೇರಿದಂತೆ ಒಟ್ಟು 41 ಕೋವಿಡ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

. . . . . . .

ವಿರಾಜಪೇಟೆಯ ವಡ್ಡರಮಡುವಿನ 38 ವರ್ಷದ ಪುರುಷ, 10 ಮತ್ತು 12 ವರ್ಷದ ಬಾಲಕ, 30 ವರ್ಷದ ಮಹಿಳೆ, 4, 10 ಮತ್ತು 11 ವರ್ಷದ ಬಾಲಕ, 14 ವರ್ಷದ ಬಾಲಕಿ, 45 ವರ್ಷದ ಪುರುಷ, 16 ವರ್ಷದ ಬಾಲಕಿ. ವಿರಾಜಪೇಟೆಯ ವಡ್ಡರಮಡುವಿನ ಗ್ರಾಮದ 47 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆ, ಬೆಂಗಳೂರು ಪ್ರಯಾಣದ ಇತಿಹಾಸವಿರುವ ವಿರಾಜಪೇಟೆ ಚಿಕ್ಕಪೇಟೆಯ 29 ವರ್ಷದ ಪುರುಷ. ಮಡಿಕೇರಿ ಮಹದೇವಪೇಟೆಯ ಅಬ್ದುಲ್ ಕಲಾಂ ಲೇಔಟ್ ನ 64 ವರ್ಷದ ಪುರುಷ, ರ್ಯಾಪಿಟ್ ಆಂಟಿಜನ್ ಪರೀಕ್ಷೆಯ ಮುಖಾಂತರ ಬೆಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ ಸೋಮವಾರಪೇಟೆಯ ಅಬ್ಬೂರ್ ಕಟ್ಟೆಯ 50 ವರ್ಷದ ಮಹಿಳೆ, ಬೆಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ ವಿರಾಜಪೇಟೆಯ ಚಾರ್ಮುಡಿಯ 57 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಭಾಗಮಂಡಲದ ಪೊಲೀಸ್ ಠಾಣೆಯ 26 ವರ್ಷದ ಪುರುಷ ಸಿಬ್ಬಂದಿ, ಭಾಗಮಂಡಲ ಎಎನ್‍ಎಫ್ ವಸತಿ ಗೃಹದ 43 ವರ್ಷದ ಪುರುಷ ಸಿಬ್ಬಂದಿ. ಸುಂಟಿಕೊಪ್ಪದ ಅಂದಗೋವೆಯ 40 ವರ್ಷದ ಪುರುಷ. ಸುಂಟಿಕೊಪ್ಪದ ಹರದೂರು ಗುಂಡಿಕುಟ್ಟಿಯ 30 ವರ್ಷದ ಮಹಿಳೆ ಮತ್ತು 09 ತಿಂಗಳ ಮಗು, ಕುಶಾಲನಗರ ನವಗ್ರಾಮದ ಕುಡ್ಲೂರುವಿನ 13 ವರ್ಷದ ಬಾಲಕಿ,  ಸೋಮವಾರಪೇಟೆಯ ಅಬ್ಬೂರುಕಟ್ಟೆ ಯಲಕ್ನೂರುವಿನ 56 ಮತ್ತು 38 ವರ್ಷದ ಪುರುಷ. ಬೆಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ ಸೋಮವಾರಪೇಟೆ ಅಬ್ಬೂರ್ ಕಟ್ಟೆಯ 42 ವರ್ಷದ ಪುರುಷ. ಸೋಮವಾರಪೇಟೆಯ ಚೌಡ್ಲು ಗಾಂಧೀನಗರದ 39 ವರ್ಷದ ಮಹಿಳೆ ಮತ್ತು 22 ವರ್ಷದ ಪುರುಷ, ಕೊಡ್ಲಿಪೇಟೆಯ ಬೆಂಬ್ಲೂರು ಅಂಚೆಯ ಸಿರಾ ಗ್ರಾಮದ 33 ವರ್ಷದ ಪುರುಷ. ಸೋಮವಾರಪೇಟೆಯ ಚೆಟ್ಟಳ್ಳಿ ಶ್ರೀಮಂಗಲ ಚೇರಲದ 11 ವರ್ಷದ ಬಾಲಕಿ, ಸೋಮವಾರಪೇಟೆಯ ಐಗೂರು ಅಂಚೆ ಕಾಜೂರು ಗ್ರಾಮದ 39 ವರ್ಷದ ಪುರುಷ, ಸೋಮವಾರಪೇಟೆಯ ಐಗೂರು ಅಂಚೆಯ ಸ್ಪ್ರಿಂಗ್ ವ್ಯಾಲಿ ಸಮೀಪದ 46 ವರ್ಷದ ಮಹಿಳೆ, ಕುಶಾಲನಗರದ ಮಾದಲಾಪುರ ಬಾಡಬೆಟ್ಟದ 32 ಮತ್ತು 65 ವರ್ಷದ ಪುರುಷ, ಮಡಿಕೇರಿಯ ಎಲ್‍ಐಜಿ ವಸತಿ ಗೃಹದ 55 ವರ್ಷದ ಪುರುಷ ಮತ್ತು 44 ವರ್ಷದ ಮಹಿಳೆ, ಕುಶಾಲನಗರ ಮುಳ್ಳುಸೋಗೆ ಕುವೆಂಪು ಲೇಔಟ್ ನ 60 ವರ್ಷದ ಪುರುಷ, ವಿರಾಜಪೇಟೆ ಕುಂಜಿಲಗೇರಿಯ 19 ವರ್ಷದ ಮಹಿಳೆ,ವಿರಾಜಪೇಟೆಯ ನಾತಂಗಾಲದ 55 ವರ್ಷದ ಮಹಿಳೆ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮುಖಾಂತರ ಮಡಿಕೇರಿ ಪೆÇಲೀಸ್ ವಸತಿ ಗೃಹದ 44 ವರ್ಷದ ಮಹಿಳೆ, ವಿರಾಜಪೇಟೆಯ ಸುಂಕದಕಟ್ಟೆಯ 44 ವರ್ಷದ ಮಹಿಳೆ, 28 ವರ್ಷದ ಪುರುಷ ಮತ್ತು 25 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 19 ಹೊಸ ಕಂಟೈನ್‍ಮೆಂಟ್ ವಲಯಗಳನ್ನು ತೆರೆಯಲಾಗಿದೆ. ಕಾಲೇಜು ಮೈದಾನ ಬೀರಂಗಡ ಲೇಔಟ್, ಚಿಕ್ಕಪೇಟೆ, ವಿರಾಜಪೇಟೆ, ವಡ್ಡರಮಾಡು ಗ್ರಾಮ, ವಿರಾಜಪೇಟೆ, ಯಲಕನೂರು ಅಬ್ಬೂರುಕಟ್ಟೆ, ಸೋಮವಾರಪೇಟೆ, ಚಾರ್ಮುಡಿ ಕಾಕೋಟುಪರಂಬು, ವಿರಾಜಪೇಟೆ ಮತ್ತು ಅಬ್ದುಲ್ ಕಲಾಂ ಲೇಔಟ್ ಹತ್ತಿರ ಎವಿ ಶಾಲೆ, ಮಹದೇವಪೇಟೆ, ಮಡಿಕೇರಿ, ಎಎನ್‍ಎಫ್ ಕ್ವಾರ್ಟಸ್  ಭಾಗಮಂಡಲ, ಅಂದಗೋವೆ. ಸುಂಟಿಕೊಪ್ಪ, ಕೂಡ್ಲೂರು ನವಗ್ರಾಮ ಕುಶಾಲನಗರ, ಅಬ್ಬೂರುಕಟ್ಟೆ ಸೋಮವಾಪೇಟೆ, ಶಿರಾ ಗ್ರಾಮ ಬೆಂಬ್ಳೂರು ಅಂಚೆ, ಕೊಡ್ಲಿಪೇಟೆ, ಚೇರಳ ಶ್ರೀಮಂಗಲ ಚೆಟ್ಟಳ್ಳಿ ಸೋಮವಾರಪೇಟೆ, ಕಾಜೂರು  ಗ್ರಾಮ ಐಗೂರು ಅಂಚೆ ಸೋಮವಾಪೇಟೆ, ಸ್ಪ್ರಿಂಗ್ ವ್ಯಾಲಿ ಹತ್ತಿರ ಐಗೂರು, ಸೋಮವಾಪೇಟೆ, ಬಾಡಬೆಟ್ಟ ಮಾದಲಾಪುರ ಕುಶಾಲನಗರ, ಕುವೆಂಪು ಲೇಔಟ್, ಮುಳ್ಳುಸೋಗೆ ಕುಶಾಲನಗರ, ಕುಂಜಿಲಗೇರಿ ವಿರಾಜಪೇಟೆ, ನಾತಂಗಾಲ ವಿರಾಜಪೇಟೆ ಮತ್ತು ಸುಂಕದಕಟ್ಟೆ ವಿರಾಜಪೇಟೆ, ಕಾರಗುಂದ ಕಡಿಯತ್ತೂರು ಮತ್ತು ತೊತೇರಿ ವಿರಾಜಪೇಟೆ ಈ ಎರಡು ಕಂಟೈನ್‍ಮೆಂಟ್ ವಲಯಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 513 ಆಗಿದ್ದು, 322 ಮಂದಿ ಗುಣಮುಖರಾಗಿದ್ದಾರೆ. 181 ಸಕ್ರಿಯ ಪ್ರಕರಣಗಳಿದ್ದು, 10 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 127 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!