ಸುಂಟಿಕೊಪ್ಪ ಪೋಲೀಸ್ ಠಾಣೆಯಲ್ಲಿ ಕಳೆದ 10 ತಿಂಗಳಿನಿಂದ ಆರಕ್ಷಕ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸಿ ಜುಲೈ 31 ರಂದು ನಿವೃತ್ತರಾದ ಬಿ. ತಿಮ್ಮಪ್ಪರವರನ್ನು ಪಂಚಾಯಿತಿ ವತಿಯಿಂದ ಬೀಳ್ಕೊಡಲಾಯಿತು. ಪೋಲೀಸ್ ಠಾಣೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಿ.ಹೆಚ್. ವೇಣುಗೋಪಾಲ್ ರವರು ತಿಮ್ಮಪ್ಪಅವರಿಗೆ ಶ್ರೀಗಂಧದ ಹಾರವನ್ನಾಕಿ, ಶಾಲು ಹೊದಿಸಿ ನೆನಪಿನ ಕಾಣಿಕೆಯನ್ನು ನೀಡಿ, ನಿವೃತ್ತ ಜೀವನಕ್ಕೆ ಶುಭಹಾರೈಸಿದರು. ಈ ಸಂದರ್ಭ ಎ.ಎಸ್.ಐ. ಕಾವೇರಪ್ಪ ಮತ್ತು ಶಿವಪ್ಪ ಹಾಗೂ ಪೊಲೀಸ್ ಸಿಬ್ಬಂದಿಗಳು ಮತ್ತು ಪಂಚಾಯತಿ ಸಿಬ್ಬಂದಿಗಳಾದ ಬಿ.ಎಸ್. ಪುನೀತ್ ಕುಮಾರ್, ಡಿ.ಎಂ. ಮಂಜುನಾಥ್, ಎಸ್.ಎ. ಶ್ರೀನಿವಾಸ್ ಹಾಗೂ ಸಂಧ್ಯಾಶಶಿ ಉಪಸ್ಥಿತರಿದ್ದರು.
- Friday
- April 4th, 2025