ಮಾಜಿ ಸಚಿವ ಬಿ ರಮಾನಾಥ ರೈ ರವರನ್ನು ಸುಳ್ಯ ಕಾಂಗ್ರೆಸ್ ಪಕ್ಷದ ಮುಖಂಡರು ಆಗಸ್ಟ್ 1ರಂದು ಸಂಜೆ ಸುಳ್ಯ ಗ್ರಾಂಡ್ ಪರಿವಾರ್ ಉಡುಪಿ ಗಾರ್ಡನ್ ಹೋಟೆಲ್ ನಲ್ಲಿ ಭೇಟಿಯಾದರು.
ಮಾಜಿ ಸಚಿವ ರಮಾನಾಥ ರೈ ಪಕ್ಷದ ಕಾರ್ಯಕ್ರಮದ ಅಂಗವಾಗಿ ಮಡಿಕೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಸುಳ್ಯ ಮಾರ್ಗವಾಗಿ ಬಂಟ್ವಾಳ ಕ್ಕೆ ಹಿಂತಿರುಗುವ ವೇಳೆ ಸುಳ್ಯದ ಪಕ್ಷದ ಮುಖಂಡರುಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ಬೆಳವಣಿಗೆಗೆ ಕಾರ್ಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳಲು ಮುಖಂಡರುಗಳು, ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು,ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯ ಪ್ರಕಾಶ್ ರೈ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ವೆಂಕಪ್ಪಗೌಡ,ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ ಜೆ,
ಪಕ್ಷದ ಮುಖಂಡರುಗಳಾದ ಎಸ್ ಸಂಸುದ್ದಿ ಅರಂಬೂರು, ನಂದರಾಜ್ ಸಂಕೇಶ್, ಭವಾನಿ ಶಂಕರ್ ಕಲ್ಮಡ್ಕ, ಶಾಫಿ ಕುತ್ತಮಟ್ಟೆ, ರಫೀಕ್ ಪಡು, ಬಶೀರ್, ಮಧುಸೂದನ್ ಬೂಡು ಮೊದಲಾದವರು ಉಪಸ್ಥಿತರಿದ್ದರು.
- Thursday
- November 21st, 2024