
ಇಂದು ಕೊಡಗಿನಾದ್ಯಂತ ಆಟಿ ಹಬ್ಬದ ದಿನ ವಾಗಿದ್ದು, ಸಂಜೆ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸತತವಾಗಿ ಎರಡು ಗಂಟೆಗಳ ಕಾಲ ಸುರಿದ ಭಾರಿ ಗಾಳಿ ಮಳೆಗೆ ನಗರದ ಹಲವಾರು ಕಡೆಗಳಲ್ಲಿ ರಸ್ತೆಗಳಲ್ಲಿ ನೀರು ಹರಿದಾಡಿದವು.ಬಹಳ ಹಿಂದಿನ ಕಾಲದಿಂದಲೇ ಬಂದಿರುವ ಆಟಿ ತಿಂಗಳನ್ನು ನೆನಪಿಸುವ ರೀತಿಯಲ್ಲಿ ಇಂದು ಸಂಜೆ 4 ಗಂಟೆಯಿಂದ ಸುಮಾರು 6 ಗಂಟೆಯ ತನಕ ಸುರಿದ ಮಳೆಯ ಅಬ್ಬರ ರೈತರನ್ನು ಸಂತುಷ್ಟ ಗೊಳಿಸಿತು. ಮಡಿಕೇರಿ, ಸುಂಟಿಕೊಪ್ಪ ,ಮಾದಾಪುರ, ಭಾಗಮಂಡಲ, ಸೋಮವಾರಪೇಟೆ ವಿರಾಜಪೇಟೆ, ಸಿದ್ದಾಪುರ ಮುಂತಾದ ಕಡೆಗಳಲ್ಲಿ ಏಕಕಾಲದಲ್ಲಿ ಮಳೆ ಸುರಿಯಿತು.