
ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ಮುಖ್ಯ ಶಿಕ್ಷಕರಾಗಿ ಕನ್ನಡ ಶಿಕ್ಷಕರಾಗಿರುವ ಯಶೋಧರ ನಾರಾಲು ಅಧಿಕಾರ ವಹಿಸಿಕೊಂಡಿದ್ದಾರೆ. ಮುಖ್ಯ ಶಿಕ್ಷಕರಾಗಿದ್ದ ಎಂ.ಎಸ್. ಶಿವರಾಮ ಶಾಸ್ತ್ರಿಯವರು ಜು. ೩೧ ರಂದು ನಿವೃತ್ತಿಹೊಂದಿದ್ದರು.
ಯಶೋಧರ ನಾರಾಲುರವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಅಜ್ಜಾವರ, ಪದವಿ ಪೂರ್ವ ಶಿಕ್ಷಣವನ್ನು ಸುಳ್ಯ ಸರಕಾರಿ ಜೂನಿಯರ್ ಕಾಲೇಜು, ಪದವಿ (ಬಿ.ಎ) ಶಿಕ್ಷಣವನ್ನು ಎನ್.ಎಂ.ಸಿ.ಯಲ್ಲಿ ಪೂರೈಸಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಐಚ್ಛಿಕ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು, ಬಳಿಕ ವಿರಾಜಪೇಟೆಯ ಸರ್ವೋದಯ ಶಿಕ್ಷಕ ಶಿಕ್ಷಣ ಕಾಲೇಜಿನಲ್ಲಿ ಬಿ.ಎಡ್. ಪದವಿಯನ್ನು ಪಡೆದರು, ಅಜ್ಜಾವರ ಸರಕಾರಿ ಪ್ರೌಢಶಾಲೆಯಲ್ಲಿ ಒಂದು ವರ್ಷ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಂತರ ಕೆ.ವಿ.ಜಿ. ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 5 ವರ್ಷ ಸಹ ಶಿಕ್ಷಕನಾಗಿ ಸೇವೆ ಸಲ್ಲಿಸಿ ೧೯೯೭ರ ಅ. ೧೭ ರಿಂದ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ೨೩ ವರ್ಷ ಕರ್ತವ್ಯ ನಿರ್ವಹಿಸಿದ್ದಾರೆ.
ಇವರು ಅಜ್ಜಾವರ ಗ್ರಾಮದ ನಾರಾಲು ನಿವೃತ್ತ ಶಿಕ್ಷಕ ದಿ. ವೀರಪ್ಪ ಗೌಡ ನಾರಾಲು ಮತ್ತು ಶ್ರೀಮತಿ ರಾಮಕ್ಕ ದಂಪತಿಗಳ ಪುತ್ರ. ಯಶೋಧರ ರವರ ಪತ್ನಿ ಭಾನುಮತಿ ವೈ ಎನ್ ಗೃಹಿಣಿ, ಮಕ್ಕಳಾದ ಆಶಿತಾ ಎನ್ ವೈ ಕೆ.ವಿ.ಜಿ ಡೆಂಟಲ್ ಕಾಲೇಜಿನಲ್ಲಿ 4ನೇ ವರ್ಷದ ದಂತ ವೈದ್ಯಕೀಯ ಶಿಕ್ಷಣ ಪಡೆಯುತ್ತಿದಾರೆ. ಅನ್ವಿತಾ ಎನ್ ವೈ ದ್ವಿತೀಯ ಪಿಯುಸಿ (pcmb) ಉತ್ತೀರ್ಣರಾಗಿದ್ದಾರೆ.