ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಇಲ್ಲಿನ ಮುಖ್ಯಗುರುಗಳಾದ ಶ್ರೀ ಎಂ ಎಸ್ ಶಿವರಾಮ ಶಾಸ್ತ್ರಿಯವರು ತಮ್ಮ 35 ವರ್ಷಗಳ ಸುದೀರ್ಘ ಶಿಕ್ಷಣ ಸೇವೆಯಿಂದ ನಿವೃತ್ತರಾಗಿದ್ದು, ಅವರ ಬೀಳ್ಕೊಡುಗೆ ಕಾರ್ಯಕ್ರಮವು ದಿನಾಂಕ 31.07.2020ನೇ ಶುಕ್ರವಾರ ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರಾದ ಶ್ರೀ ನೆಟ್ಟಾರು ವೆಂಕಟ್ರಮಣ ಭಟ್ ವಹಿಸಿದ್ದರು. ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ ಅಣ್ಣಾ ವಿನಯಚಂದ್ರ ಕಿಲಂಗೋಡಿ ಅಭಿನಂದನಾ ಕಾರ್ಯಕ್ರಮ ನೆರವೇರಿಸಿದರು.ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಎಸ್ ಪಿ ಮಹಾದೇವ್,ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶ್ರೀ ಚಂದ್ರಶೇಖರ ಪೇರಾಲು,ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀ ಲಕ್ಷ್ಮೀಶ ರೈ,ಸುಳ್ಯ ತಾಲೂಕು ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಜಾಹ್ನವಿ ಕಾಂಚೋಡು,ಸಂಸ್ಥೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಪುತ್ಯ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಚ್ಯುತ ಮೇಲ್ಕಜೆ ಹಾಗೂ ನಿಯೋಜಿತ ಮುಖ್ಯಗುರುಗಳಾದ ಶ್ರೀ ಯಶೋಧರ ನಾರಾಲು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಡಳಿತ ಸಮಿತಿಯ ಕೋಶಾಧಿಕಾರಿ ಶ್ರೀ ಕಿರಣ್ ನೆಟ್ಟಾರು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಶಿಕ್ಷಕಿ ಸಹನಾ ನಿರೂಪಿಸಿ, ಶಿಕ್ಷಕರಾದ ಶ್ರೀ ಲೋಕೇಶ್ ಬೆಳ್ಳಿಗೆ ವಂದಿಸಿದರು.
- Friday
- November 15th, 2024