ಭಾರತೀಯ ಹವಾಮಾನ ಇಲಾಖೆ ಹೊರಡಿಸಿರುವ ಮುನ್ಸೂಚನೆಯಂತೆ ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿದ್ದು ಅದರ ಪ್ರಭಾವದಿಂದ
ಮುಂದಿನ 3 ದಿನಗಳ ಕಾಲ ಜಿಲ್ಲೆಯಾದ್ಯಂತ ಭಾರೀ ಮಳೆ ಬೀಳುವ ಬಗ್ಗೆ ಮಾಹಿತಿ ದೊರೆತಿದೆ.
ದಕ್ಷಿಣ ಕರಾವಳಿ ಭಾಗದಲ್ಲಿ ಅಂಫಾನ್ ಚಂಡಮಾರುತ ಬಂದರೇ ಭಾರಿ ವೇಗದಲ್ಲಿ ಗಾಳಿ ಬೀಸಲಿದೆ. ಜಿಲ್ಲಾಡಳಿತ ವು ಜಿಲ್ಲೆಯಲ್ಲಿ ೩ ದಿನಗಳ ಕಾಲ ಯಲ್ಲೋ ಅಲರ್ಟ್ ಘೋಷಿಸಿದ್ದಾರೆ.ಆದುದರಿಂದ ಸುಳ್ಯ ವಲಯ ವ್ಯಾಪ್ತಿಯ ಎಲ್ಲಾ ವಿಖಾಯ ಕಾರ್ಯಕರ್ತರು ತುರ್ತು ಸೇವೆಗಾಗಿ ಸನ್ನದ್ಧರಾಗಿರಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅದೇ ರೀತಿ ಪ್ರಾಕೃತಿಕ ವಿಕೋಪದಂಥಹ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ದ.ಕ.ಜಿಲ್ಲಾ ಕಂಟ್ರೋಲ್ ರೂಮ್ 1077 ಗೆ ಕರೆ ನೀಡಬಹುದು. ಹಾಗೂ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ವಿಖಾಯ ಸನ್ನದ್ಧ ಸೇವೆಯ ಹೆಲ್ಪ್ ಡೆಸ್ಕ್ ಸದಸ್ಯರಾದ ತಾಜುದ್ದೀನ್ ಟರ್ಲಿ 9686947071, ಖಲಂದರ್ ಎಲಿಮಲೆ,9448625115, ಷರೀಫ್ ಅಜ್ಜಾವರ,8105438805, ಆಶಿಕ್ ಸುಳ್ಯ 8105200959, ತಾಜುದ್ದೀನ್ ಆರಂತೋಡು 8088493776 ಇವರನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.