- Monday
- July 27th, 2026
ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸುಳ್ಯ, ದ.ಕ.ಜಿ.ಪಂ. ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಜಾಲ್ಸೂರು ಸುಳ್ಯ ತಾಲೂಕು ದ.ಕ. ಇದರ ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭವು ಇಂದು ನಡೆಯಿತು. ನೂತನ ಕೊಠಡಿಗಳ ಉದ್ಘಾಟನೆಯನ್ನು ಶಾಸಕಿ ಕು.ಭಾಗೀರಥಿ ಮುರುಳ್ಯ ನೆರವೇರಿಸಿದರು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ತಿರುಮಲೇಶ್ಚರಿ...
ಸುಳ್ಯ ರಥಬೀದಿಯ ಬಳಿಯಲ್ಲಿ ಕಾರು ಬ್ರೇಕ್ ವೈಫಲ್ಯಗೊಂಡು ಹಿಮ್ಮುಖವಾಗಿ ಚಲಿಸಿ ಮಹಿಳೆ ಮತ್ತು ಗೋಡೆಗೆ ಗುದ್ದಿದ ಘಟನೆ ಇದೀಗ ವರದಿಯಾಗಿದೆ. ಕೆರೆಮೂಲೆ ರಸ್ತೆಯಿಂದ ರಥಬೀದಿ ಸಂಪರ್ಕಿಸುವ ರಸ್ತೆಯಲ್ಲಿ ವಿನಾಯಕ್ ಕಾಂಪ್ಲೆಕ್ಸ್ ಬಳಿಯಲ್ಲಿ ಈ ಘಟನೆ ನಡೆದಿದ್ದು ಇದೀಗ ಗಾಯಗೊಂಡ ಮಹಿಳೆಯನ್ನು ಸ್ಥಳೀಯರು ಅಟೋ ರಿಕ್ಷದ ಮೂಲಕ ಸರಕಾರಿ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ ಎಂದು ತಳಿದುಬಂದಿದೆ.
ಅಂತರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ಪಂಜ ಪರಿಸರದ ಪಲ್ಲೋಡಿ ಕಾಲೋನಿಯಲ್ಲಿ ವಾಸ ಮಾಡುತ್ತಿರುವ ಕಡುಬಡತನದಲ್ಲಿರುವ ನಿವಾಸಿಗಳಿಗೆ ಕ್ಲಬ್ ವತಿಯಿಂದ ಅಕ್ಕಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಉಳ್ಳಾಕುಲು ಕಲಾ ರಂಗಾ, {ರಿ } ಪಲ್ಲೋಡಿ ಇದರ ಪ್ರಾಯೋಜಕತ್ವದಲ್ಲಿ ಅಧ್ಯಕ್ಷ ಬಾಲಕೃಷ್ಣ ಗೌಡ ಪೂರ್ವ ಅಧ್ಯಕ್ಷ ಪ್ರಕಾಶ್ ಜಾಕೆ ಅತಿಥಿಗಳಾಗಿ ಉಪಸ್ಥಿತರಿದ್ದು ಅಕ್ಕಿಯನ್ನು...
ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಮತ್ತು ದೈವಗಳ ನೇಮೋತ್ಸವವು ಸಂಪನ್ನಗೊಂಡಿತು. ಫೆ. ೧ರಂದು ಗಣಪತಿ ಹೋಮ, ಏಕಾದಶ ರುದ್ರಾಭಿಷೇಕ ನವಕ ಕಲಶಾಭಿಷೇಕ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆದ ಬಳಿಕ ಚೆಂಡೆವಾದನ ನಡೆಯಿತು. ರಾತ್ರಿ ದೇವರ ಉತ್ಸವ ಬಲಿ ಹೊರಟು, ವಸಂತ ಕಟ್ಟೆ ಪೂಜೆ, ಬಟ್ಟಲು ಕಾಣಿಕೆ,...
ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪಾಂಬಾರ್ ಎಂಬಲ್ಲಿ ಜ. 11ರಂದು ಮಹಿಳೆಯೊಬ್ಬರ ಚಿನ್ನದ ಸರವನ್ನು ಅಪರಿಚಿತರು ಸುಲಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಆರೋಪಿಗಳ ಶೀಘ್ರ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ತನಿಖಾ ತಂಡ ಶೀಘ್ರವಾಗಿ ಆರೋಪಿಗಳ ಪತ್ತೆ ಮಾಡಿದ್ದು, ಮುಕ್ವೆ, ನರಿಮೊಗರು ಗ್ರಾಮ, ಪುತ್ತೂರು ನಿವಾಸಿ...
ಅಯ್ಯನಕಟ್ಟೆಯ "ನಮ್ಮ ಆರೋಗ್ಯಧಾಮ" ಮಲ್ಟಿಸ್ಪೆಷಾಲಿಟಿ ಮೆಡಿಕಲ್ ಸೆಂಟರ್ ನಲ್ಲಿ ಪ್ರಸಾದ್ ನೇತ್ರಾಲಯದ ಸಹಯೋಗದೊಂದಿಗೆ ಉಚಿತ ಕನ್ನಡಕ ವಿತರಣೆ ನಡೆಯಿತು. ಸುಮಾರು 29 ಮಂದಿ ಇದರ ಪ್ರಯೋಜನವನ್ನು ಪಡೆದುಕೊಂಡರು.
ಸುಳ್ಯ ತಾಲೂಕು ಹರಿಹರ ಪಲ್ಲತ್ತಡ್ಕ ಗ್ರಾಮದ ಅಂಙಣ ದಿ.ಅಚ್ಚುತ ಗೌಡ ಅವರ ಪುತ್ರ ಪ್ರಮೋದ್ ಅಂಙಣ ಅವರು ಫೆ.02 ರಂದು ನಿಧನ ಹೊಂದಿದರು.ಮೃತರು ತಾಯಿ ಭಾಗೀರಥಿ, ಪತ್ನಿ ರೇವತಿ, ಇಬ್ಬರು ಪುತ್ರರು, ಸಹೋದರ, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ದೊಡ್ಡತೋಟ ವಲಯದ ವತಿಯಿಂದ ಕಳಂಜ ಜನತಾ ಕಾಲೋನಿಯಲ್ಲಿ ಇಂದು ಶ್ರಮದಾನ ನಡೆಸಲಾಯಿತು. ಈ ಸಂದರ್ಭದಲ್ಲಿ ಸಂಯೋಜಕಿ ಹರ್ಷಿತಾ.ಎ.ಆರ್, ಘಟಕ ಸಂಯೋಜಕರಾದ ವೆಂಕಟ್ರಮಣ, ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಬೇರಿಕೆ, ಗಗನ್ ನಾಲ್ಗುತ್ತು, ಸತೀಶ್ ಕಳಂಜ, ಗಿರಿಧರ ಕಳಂಜ, ರಘುನಾಥ ರೈ ಅಂಕತ್ತಡ್ಕ ಹಾಗೂ ಘಟಕದ...
ಇತಿಹಾಸ ಪ್ರಸಿದ್ಧ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಫೆ.8 ರಿಂದ ಫೆ.10 ರವರೆಗೆ ನಡೆಯಲಿದ್ದು , ಇಂದು ಗೊನೆ ಮುಹೂರ್ತ ನಡೆಯಿತು.ದೇವಸ್ಥಾನದ ಪ್ರಧಾನ ಅರ್ಚಕ ಪದ್ಮನಾಭ ಭಟ್ ಪೂಜಾ ಕಾರ್ಯ ನೆರವೇರಿಸಿದರು.ಈ ಸಂದರ್ಭದಲ್ಲಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ...
ಜ.24 ರಿಂದ ಫೆ.9 ರ ತನಕ ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವರ್ಷಾವಧಿ ಜಾತ್ರೋತ್ಸವವು ನಡೆಯಲಿದೆ. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಯವರ ನೇತೃತ್ವದಲ್ಲಿ ವಿವಿಧ ವೈಧಿಕ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ.ಫೆ.2 ರಂದು ಮುಂಜಾನೆ ಬಂಟಮಲೆಯ ತೀರ್ಥದ ಸ್ಥಳದಲ್ಲಿ ಪೂಜೆ ಸಲ್ಲಿಸಿ ಜಾತ್ರೆಗೆ ತೀರ್ಥ ತರಲಾಯಿತು. ಉತ್ಸವ, ಮಹಾಪೂಜೆ ಜರುಗಲಿದೆ.ದೇವಳದ ಉತ್ಸವ ಸಮಿತಿ...
Loading posts...
All posts loaded
No more posts
