ಸುಳ್ಯ : ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರ ಚುನಾವಣಾ ಕಛೇರಿ ಉದ್ಘಾಟನೆ

ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪೂಜಾರಿ ರವರ ಚುಣಾವಣಾ ಕಛೇರಿಯನ್ನು ಸುಳ್ಯದಲ್ಲಿಂದು ಮಾಜಿ ಸಚಿವ ರಮಾನಾಥ ರೈ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ ಕುಮಾರ್ ಸೊರಕೆ , ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ , ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪೂಜಾರಿ , ಐವನ್ ಡಿಸೋಜ ,...

ಸುಳ್ಯ: ಎನ್ನೆಂಸಿಯಲ್ಲಿ ಇಂಟರ್ ಕ್ಲಾಸ್ ಕಾಮರ್ಸ್ ಫೆಸ್ಟ್: “ಅದ್ವಿತೀಯ2ಏ24”

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಿಂದ ಇಂಟರ್ ಕ್ಲಾಸ್ ಕಾಮರ್ಸ್ ಫೆಸ್ಟ್ “ಅದ್ವಿತೀಯ2ಏ24” ಕಾರ್ಯಕ್ರಮವನ್ನು ಮಾ.೨೭ರಂದು ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಲೇಜಿನ ಶೈಕ್ಷಣಿಕ ನಿದೇರ್ಶಕರಾದ ಪ್ರೊ. ಎಂ. ಬಾಲಚಂದ್ರ ಗೌಡರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್.ಎಂ.ಎA ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತç ವಿಭಾಗದ ಮುಖ್ಯಸ್ಥೆ ಹಾಗೂ...
Ad Widget

ಸುಳ್ಯ ; ರಿಕ್ಷಾ ಮತ್ತು ಸ್ಕೂಟಿ ಮುಖಾಮುಖಿ  ಡಿಕ್ಕಿ-ಸವಾರನಿಗೆ ಗಾಯ!

ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ರಿಕ್ಷಾ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿ ಸವಾರನಿಗೆ ಗಾಯವಾದ ಘಟನೆ ಇಂದು ಮುಂಜಾನೆ  ನಡೆದಿದೆ. ಬಸ್ ನಿಲ್ದಾಣದಿಂದ ಮುಖ್ಯ ರಸ್ತೆಗೆ ಬರುತ್ತಿದ್ದ ರಿಕ್ಷಾಕ್ಕೆ ಶ್ರೀ ರಾಮ ಪೇಟೆಯಿಂದ ಬರುತ್ತಿದ್ದ ಸ್ಕೂಟಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರನ ಕಾಲಿಗೆ ಅಲ್ಪ ಪ್ರಮಾಣದಲ್ಲಿ ಗಾಯವಾಗಿದೆ. ರಿಕ್ಷಾದ ಮುಂಭಾಗ ಮತ್ತು...

ಡಾ. ಅನುರಾಧಾ ಕುರುಂಜಿಯವರಿಗೆ  ಶಿವಶರಣೆ ನೀಲಾಂಬಿಕೆ  ಪ್ರಶಸ್ತಿ  ಪ್ರದಾನ

ಸುಳ್ಯದ  ಉಪನ್ಯಾಸಕರು, ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರಿಗೆ ಬೆಂಗಳೂರಿನ ವಿಶ್ವ ಕನ್ನಡ ಸಂಸ್ಥೆಯವರು  ಕೊಡ ಮಾಡುವ  ಶಿವಶರಣೆ ನೀಲಾಂಬಿಕೆ  ಪ್ರಶಸ್ತಿಯನ್ನು ಮಾರ್ಚ್ 29, 2024 ರಂದು ಬೆಂಗಳೂರಿನ ಬಾಗಲಕುಂಟೆ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ  ನಡೆದ ವಿಶ್ವ ಕನ್ನಡ ರಾಜ್ಯ ಮಟ್ಟದ  ಪ್ರಥಮ ಮಹಿಳಾ ಸಮ್ಮೇಳನದಲ್ಲಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ...

ಸುಳ್ಯ : ಕಾರ್ಯಕರ್ತರ ಸಮಾವೇಶದಲ್ಲಿ ಘಟಾನುಘಟಿ ನಾಯಕರು ಭಾಗಿ : ಸುಳ್ಯ ಜಿಲ್ಲೆಗೆ ಪ್ರೇರಣಾದಾಯಿ ಕ್ಷೇತ್ರ – ಕಟೀಲ್

ಸುಳ್ಯ ಜಿಲ್ಲೆಗೆ ಪ್ರೇರಣಾದಾಯಿ ಕ್ಷೇತ್ರ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಸುಳ್ಯದಲ್ಲಿಂದು ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.‌ ಸಾಮಾನ್ಯ ಕಾರ್ಯಕರ್ತನಿಗೆ ರಾಜ್ಯಾಧ್ಯಕ್ಷ ಮತ್ತು ಲೋಕಸಭಾ ಸದಸ್ಯ ಸ್ಥಾನದ ಅಭ್ಯರ್ಥಿಯನ್ನಾಗಿಸಿ ಬೆಳೆಸಿದ ಪಕ್ಷವಿದ್ದರೆ ಅದು ಭಾರತೀಯ ಜನತಾ ಪಕ್ಷ ಎಂದು ಹೇಳಿದರು. ತಮ್ಮ ಜಿಲ್ಲೆಗೆ ಮೋದಿಯವರ ಅವಧಿಯಲ್ಲಿ 1 ಲಕ್ಷದ...

ಎಲಿಮಲೆ : ಹರ್ಷ ಗಾರ್ಮೆಂಟ್ಸ್ ಶುಭಾರಂಭ

ಎಲಿಮಲೆಯ ಪಾರೆಪ್ಪಾಡಿ ಕಾಂಪ್ಲೆಕ್ಸ್ ನಲ್ಲಿ ಹರಿಶ್ಚಂದ್ರ ಪಟ್ಟೆ ಮಾಲಕತ್ವದ ಹರ್ಷ ಗಾರ್ಮೆಂಟ್ಸ್ ಮಾ.21 ರಂದು ಶುಭಾರಂಭಗೊಂಡಿತು. ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಚಂದ್ರಶೇಖರ ಭಟ್ ತಳೂರು, ಉದಯಕುಮಾರ್ ಎಂ., ಎ.ವಿ.ತೀರ್ಥರಾಮ , ಶೈಲೇಶ್ ಅಂಬೆಕಲ್ಲು, ಗೋಪಿನಾಥ್ ಮೆತ್ತಡ್ಕ, ನಿತ್ಯಾನಂದ ಪಾರೆಪ್ಪಾಡಿ, ರಾಧಾಕೃಷ್ಣ ಶ್ರೀ ಕಟೀಲ್, ಗದಾಧರ ಬಾಳುಗೋಡು,...

ಏ.06: ಸ್ನೇಹ ಶಾಲೆಯಲ್ಲಿ ಸಾಹಿತಿ ಎಲ್.ಎಸ್.ಎಸ್. ಜನ್ಮ ಶತಮಾನೋತ್ಸವ ಹಾಗೂ ಅಗ್ನಿಹೋತ್ರದ ಮಹತ್ವದ ಬಗ್ಗೆ ಉಪನ್ಯಾಸ

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಎಪ್ರಿಲ್ 6 ರಂದು ಕನ್ನಡದ ಖ್ಯಾತ ಸಾಹಿತಿ ಪ್ರೊ. ಎಲ್. ಎಸ್. ಶೇಷಗಿರಿ ರಾವ್ ಅವರ ಜನ್ಮಶತಮಾನೋತ್ಸವದ ಆಚರಣೆ ಹಾಗೂ ವಿದ್ಯಾನಿಧಿಯ ಸ್ಥಾಪನೆ ಹಾಗೂ ಅಗ್ನಿಹೋತ್ರ ದ ಮಹತ್ವದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಸ್ನೇಹ ಶಾಲೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಹೇಳಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ...

ಏ.06: ಸ್ನೇಹ ಶಾಲೆಯಲ್ಲಿ ಸಾಹಿತಿ ಎಲ್.ಎಸ್.ಎಸ್. ಜನ್ಮ ಶತಮಾನೋತ್ಸವ ಹಾಗೂ ಅಗ್ನಿ ಹೋತ್ರದ ಮಹತ್ವದ ಬಗ್ಗೆ ಉಪನ್ಯಾಸ ಕಾರ್ಯಕ್ರಮ

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಎಪ್ರಿಲ್ 6 ರಂದು ಕನ್ನಡದ ಖ್ಯಾತ ಸಾಹಿತಿ ಪ್ರೊ. ಎಲ್. ಎಸ್. ಶೇಷಗಿರಿ ರಾವ್ ಅವರ ಜನ್ಮಶತಮಾನೋತ್ಸವದ ಆಚರಣೆ ಹಾಗೂ ವಿದ್ಯಾನಿಧಿಯ ಸ್ಥಾಪನೆ ಹಾಗೂ ಅಗ್ನಿಹೋತ್ರ ದ ಮಹತ್ವದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಸ್ನೇಹ ಶಾಲೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಹೇಳಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ...

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ವತಿಯಿಂದ ಕಾರ್ಯಕರ್ತರ ಸಮಾವೇಶ  ಕಿಕ್ಕಿರಿದು ಸೇರಿದ ಕಾರ್ಯಕರ್ತರು

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ವತಿಯಿಂದ ಕಾರ್ಯಕರ್ತರ ಸಮಾವೇಶವು ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಮಾ. 29 ರಂದು ನಡೆಯುತ್ತಿದ್ದು ಈ ಸಭೆಯಲ್ಲಿ ಕಾರ್ಯಕರ್ತರು ಕಿಕ್ಕಿರಿದು ಭಾಗವಹಿಸಿದ್ದಾರೆ. ಈ ಕಾರ್ಯಕರ್ತರ ಸಮಾವೇಶದ ವೇದಿಕೆಯಲ್ಲಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಬಿಜೆಪಿ ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ, ಮಾಜಿ ಸಚಿವರಾದ ಎಸ್ ಅಂಗಾರ, ಭಾಗೀರಥಿ ಮುರುಳ್ಯ, ಪರಿಷತ್ ಸದಸ್ಯರಾದ...

ಪಂಜ : ಮಹಿಳೆಯ ಕುತ್ತಿಗೆಯಿಂದ ಸರ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು- ಆರೋಪಿಗಳು ವಶಕ್ಕೆ!

ಪಂಜ ಸಮೀಪದ ಪಂಬೆತ್ತಾಡಿ ಗ್ರಾಮದ ಡಬ್ಬಲ್ ಕಟ್ಟೆಯ ಸಮೀಪ ಮಾ.4 ರಂದು ಮಹಿಳೆಯೋರ್ವರ ಚಿನ್ನದ ಸರ ಕಸಿದು ಕಳ್ಳರು ಪರಾಯಾಗಿದ್ದರು. ಬೈಕ್ ನಲ್ಲಿ ಬಂದ ಇಬ್ಬರು ಕಳ್ಳರು ಕಳ್ಳತನ ಮಾಡಿದ್ದರು. ಇದೀಗ ಪೊಲೀಸರು ಕಳ್ಳತನ ಮಾಡಿದ ಚಿತ್ರದುರ್ಗ ಹಾಗೂ ಬೇಲೂರು ಮೂಲದ ಆರೋಪಿಗಳನ್ನು ದಸ್ತಗಿರಿ ಮಾಡಿ ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
Loading posts...

All posts loaded

No more posts

error: Content is protected !!