Ad Widget

ಏ.06: ಸ್ನೇಹ ಶಾಲೆಯಲ್ಲಿ ಸಾಹಿತಿ ಎಲ್.ಎಸ್.ಎಸ್. ಜನ್ಮ ಶತಮಾನೋತ್ಸವ ಹಾಗೂ ಅಗ್ನಿಹೋತ್ರದ ಮಹತ್ವದ ಬಗ್ಗೆ ಉಪನ್ಯಾಸ

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಎಪ್ರಿಲ್ 6 ರಂದು ಕನ್ನಡದ ಖ್ಯಾತ ಸಾಹಿತಿ ಪ್ರೊ. ಎಲ್. ಎಸ್. ಶೇಷಗಿರಿ ರಾವ್ ಅವರ ಜನ್ಮಶತಮಾನೋತ್ಸವದ ಆಚರಣೆ ಹಾಗೂ ವಿದ್ಯಾನಿಧಿಯ ಸ್ಥಾಪನೆ ಹಾಗೂ ಅಗ್ನಿಹೋತ್ರ ದ ಮಹತ್ವದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಸ್ನೇಹ ಶಾಲೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಹೇಳಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು. ಎಲ್.ಎಸ್. ಶೇಷಗಿರಿ ರಾವ್ ರವರು ಕನ್ನಡ ಸಾಹಿತ್ಯ ವಿಮರ್ಶೆಗೆ ಭದ್ರ ಬುನಾದಿ ಹಾಕಿದವರು. ಉಡುಪಿಯಲ್ಲಿ ನಡೆದ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಪಡೆದ ಈ ಹಿರಿಯರ ಶತಮನೋತ್ಸವದ ಆಚರಣೆಯನ್ನು ನಡೆಸುವ ಅವಕಾಶ ಪಡೆದುದಕ್ಕಾಗಿ ನಮಗೆ ಹೆಮ್ಮೆ ಎನಿಸುತ್ತದೆ. ಇದೇ ಸಂದರ್ಭದಲ್ಲಿ ಕನ್ನಡ ಮಾಧ್ಯಮದ ನಮ್ಮ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳ ಉಚಿತ ಶಿಕ್ಷಣಕ್ಕಾಗಿ ಎಲ್.ಎಸ್.ಎಸ್. ವಿದ್ಯಾನಿಧಿಯ ಸ್ಥಾಪನೆಯ ಕಾರ್ಯಕ್ರಮವೂ ಇದೆ. ಶ್ರೀಮತಿ ಭಾರತಿ ಶೇಷಗಿರಿ ರಾವ್ ರವರು ವಿದ್ಯಾನಿಧಿ ಸಮರ್ಪಣೆಯನ್ನು ಮಾಡಲಿದ್ದಾರೆ. ಶೇಷಗಿರಿ ರಾವ್ ರವರ ಸಾಂಸ್ಕೃತಿಕ ಕೊಡುಗೆಗಳನ್ನು ಕುರಿತು ಸಾಹಿತಿ ಹಾಗೂ ಶಿಕ್ಷಣ ತಜ್ಞ ಶ್ರೀ ಅರವಿಂದ ಚೊಕ್ಕಾಡಿಯವರು ಉಪನ್ಯಾಸ ನೀಡಲಿದ್ದಾರೆ. ಬೆಂಗಳೂರಿನ ಖ್ಯಾತ ಚಿಂತಕ ಹಾಗೂ ಕನ್ನಡಪರ ಹೋರಾಟಗಾರ ರಾ. ನಂ. ಚಂದ್ರಶೇಖರರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಸಮಾರಂಭದಲ್ಲಿ ವಿಶೇಷ ಕಾರ್ಯಕ್ರಮವಾಗಿ ಜರ್ಮನಿಯ ಹೋಮ ಚಿಕಿತ್ಸಾ ತಜ್ಞ ಡಾ. ಉರ್ಲಿಕ್ ಬರ್ಕ್ ರವರು “ಅಗ್ನಿಹೋತ್ರದ ಮಹತ್ವ’ದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಅವರು 6ನೇ ತಾರೀಕಿನಂದು ಸೂರ್ಯೋದಯ ಹಾಗೂ ಸೂರ್ಯಾಸ್ತಕ್ಕೆ ಸರಿಯಾಗಿ ಸ್ನೇಹ ಶಾಲೆಯ ಸೂರ್ಯಾಲಯದಲ್ಲಿ ಅಗ್ನಿಹೋತ್ರ ನಡೆಸಲಿದ್ದಾರೆ. ಸಾರ್ವಜನಿಕರಿಗೆ ಇದನ್ನು ವೀಕ್ಷಿಸಲು ಅವಕಾಶವಿದೆ. ಡಾ. ಉಕ್ ಬರ್ಕ್‌ರವರು ಯುರೋಪು ಮತ್ತು ಏಶಿಯಾದ ವಿಶ್ವವಿದ್ಯಾಲಗಳಲ್ಲಿ ವೇದ ಜ್ಞಾನ ಪ್ರಸಾರ ಮಾಡುತ್ತಿದ್ದಾರೆ. ಅವರು ಅಂತಾರಾಷ್ಟ್ರೀಯ ಪರಿಸರ ತಜ್ಞ ದೆಹಲಿಯ ಅರುಣ್ ಕಶ್ಯಪ್‌ ರೊಂದಿಗೆ ಸ್ನೇಹ ಸಂಸ್ಥೆಗೆ ಬರಲಿದ್ದಾರೆ. ಅಗ್ನಿಹೋತ್ರವು ಪರಿಸರದ ಮೇಲೆ ಉಂಟುಮಾಡುವ ಪ್ರಭಾವದ ಬಗ್ಗೆ ಸುಳ್ಯದ ಸಾರ್ವಜನಿಕರಿಗೆ ತಿಳುವಳಿಕೆಗಾಗಿ ಅವರ ಉಪನ್ಯಾಸವನ್ನು ಏರ್ಪಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಡಾ. ವಿದ್ಯಾಶಾಂಭವ ಪಾರೆ, ಕಾರ್ಯದರ್ಶಿ ಹಾಗೂ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!