- Sunday
- July 26th, 2026
ಎಮ್ಮೆಮಾಡಿನಿಂದ ಮಂಗಳೂರು ಕಡೆಗೆ ಜ್ಯೂಸ್ ಸಾಗಾಟ ಮಾಡುತ್ತಿದ್ದ ಲಾರಿ ಜೋಡುಪಾಲ ಬಳಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಘಟನೆ ಇಂದು ಮುಂಜಾನೆ ನಡೆದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಸೋಣಂಗೇರಿ ಮತಗಟ್ಟೆಯಲ್ಲಿ ಮಹಿಳೆಯೋರ್ವರ ಆಧಾರ್ ಮತ್ತು ಚುನಾವಣಾ ಗುರುತಿನಲ್ಲಿ ಜೆರಾಕ್ಸ್ ಇದ್ದರೂ, ರಾಜಕೀಯ ಪಕ್ಷಗಳ ಏಜೆಂಟರಿಗೂ ವ್ಯಕ್ತಿ ಇವರೇ ಎಂದು ಖಚಿತ ಪಡಿಸಿದ್ದರು ಪೋಲಿಂಗ್ ಆಫೀಸ್ ಮಾತ್ರ ಮತಚಲಾವಣೆ ಮಾಡಲು ಅವಕಾಶ ನೀಡದ ಘಟನೆ ವರದಿಯಾಗಿದೆ. ಮತದಾನದಿಂದ ವಂಚಿತರಾಗಿ ಮಹಿಳೆ ತೆರಳಿದ್ದು ಈ ರೀತಿಯಲ್ಲಿ ಹಕ್ಕನ್ನು ಕಸಿದುಕೊಳ್ಳುವುದು ಯಾವ ನ್ಯಾಯ ಎಂದು ಏಜೆಂಟರು ಬೇಸರ ವ್ಯಕ್ತಪಡಿಸಿದ್ದಾರೆ....
ಸುಳ್ಯ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 155 ಸಖಿ ಮತಗಟ್ಟೆಯಾಗಿದ್ದು ಮುಂಜಾನೆ ಬಿರುಸಿನಿಂದ ಮತದಾನ ನಡೆದಿದ್ದು ಇದೀಗ ಮಧ್ಯಾಹ್ನದ ಸಂದರ್ಭದಲ್ಲಿ ಮತಗಟ್ಟೆಯು ಖಾಲಿ ಖಾಲಿಯಾಗಿದೆ . ಸುಮಾರು ನಿಮಿಷಗಳಿಗೆ ಒಂದರಂತೆ ಮತಗಳು ಇದೀಗ ಚಲಾವಣೆ ಆಗುತ್ತಿದ್ದು ಸಂಜೆಯ ವೇಳೆಗೆ ಮತ್ತೆ ಜನರ ಕ್ಯೂ ಹೆಚ್ಚಾಗಲಿದೆ . ಬಿರು ಬಿಸಿಲನ್ನು ಲೆಕ್ಕಿಸದೇ ಮತ ಕೇಂದ್ರದಲ್ಲಿ ನೆರೆದ ಕುಕ್ಕುಜಡ್ಕ...
ಬೊಳುಬೈಲು ಮತದಾನ ಕೇಂದ್ರದಲ್ಲಿ ಕರ್ತವ್ಯ ನಿರತ ಸಂಜೀವಿನಿ ಒಕ್ಕೂಟದ ಸದಸ್ಯೆ ಹಾಗೂ ಸ್ಥಳೀಯ ಗ್ರಾ.ಪಂ. ಸದಸ್ಯರೊರ್ವರ ಮಧ್ಯೆ ಪರಸ್ಪರ ಮಾತಿನ ಚಕಮಕಿ ನಡೆದು, ಸ್ಥಳಕ್ಕೆ ಪೊಲೀಸರು ಆಗಮಿಸಿ, ಸಂಜೀವಿನಿ ಒಕ್ಕೂಟದ ಮಹಿಳೆಯನ್ನು ಮತದಾನ ಕೇಂದ್ರದಿಂದ ಹೊರಗೆ ಕಳುಹಿಸಿದ ಘಟನೆ ನಡೆದಿದೆ. ಜಾಲ್ಸೂರು ಗ್ರಾಮ ಪಂಚಾಯತಿಯ ಶ್ರೀ ಸುಬ್ರಹ್ಮಣ್ಯ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವೇದಾ ಶೆಟ್ಟಿ...
ನಡುಗಲ್ಲು ಮತಗಟ್ಟೆ ಬಳಿ ಸುಮಾರು ನೂರಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪರ ಮತಯಾಚನೆ ಮಾಡಿದರು.
ಬೈಕು ಹಾಗೂ ಕಾರು ನಡುವೆ ಭೀಕರ ಅಪಘಾತ ನಡೆದು ಹಿಂಬದಿ ಬೈಕ್ ಸವಾರ ಮೃತಪಟ್ಟ ಘಟನೆ ಕಲ್ಲುಗುಂಡಿ ಸಮೀಪದ ದೊಡ್ಡಡ್ಕದಲ್ಲಿ ಕಳೆದ ರಾತ್ರಿ ನಡೆದಿದೆ.ಮತಹಾಕಲು ಬೆಂಗಳೂರಿನಿಂದ ಅರಂತೋಡಿಗೆ ಬರುತ್ತಿದ್ದ ಯುವಕ ಮೃತ ಪಟ್ಟಿರುವುದಾಗಿ ತಿಳಿದುಬಂದಿದೆ. ಬೈಕ್ ರೈಡ್ ಮಾಡುತ್ತಿದ್ದ ಯುವಕ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ.
ಸುಳ್ಯ ತಾಲೂಕು ದಂಡಾಧಿಕಾರಿಗಳಾದ ಜಿ ಮಂಜುನಾಥ್ ರವರಿಗೆ ಸಂಪಾಜೆ ಮೂಲದ ವ್ಯಕ್ತಿಯೋರ್ವರು ದೂರವಾಣಿ ಮೂಲಕ ಅವಾಚ್ಯಾ ಶಬ್ದಗಳಿಂದ ನಿಂದನೆ ಮಾಡಿ ಪೋಲಿಸ್ ಇಲಾಖೆಗೆ ದೂರು ನೀಡಿದ ಪ್ರಕರಣ ಠಾಣೆಯಲ್ಲೆ ಇತ್ಯರ್ಥವಾದ ಘಟನೆ ವರದಿಯಾಗಿದೆ. ಸಂಪಾಜೆ ಮೂಲದ ಧೀರಜ್ ಎಂಬುವ ವ್ಯಕ್ತಿಯವರು ತಮ್ಮ ಜಮೀನಿನ ಕುರಿತಾದ ವಿಚಾರದಲ್ಲಿ ದೂರವಾಣಿ ಕರೆ ಮಾಡಿದ್ದು, ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳು...
ಸುಳ್ಯ : ಅಡ್ಕಾರ್ ಬೂತ್ ಸಂಖ್ಯೆ ೧೮೫ ಕ್ಕೆ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳು ಭೇಟಿ ನೀಡಿ ಮತದಾರರನ್ನು ಮತ್ತು ಸಮಗ್ರವಾಗಿ ಚುನಾವಣೆ ನಡೆಯುತ್ತಿರುವ ಬಗ್ಗೆ ವೀಕ್ಷಣೆ ನಡೆಸಿದರು.
ಸುಳ್ಯ: ಪ್ರತಿ ಚುನಾವಣಾ ಬೂತ್ ಗಳಲ್ಲಿ ನವ ಶಕ್ತಿ ನಾರಿಯರು ಎಂಬ ಪರಿಕಲ್ಪನೆಯಡಿಯಲ್ಲಿ ಮತಚಲಾವಣೆ ಮಾಡಿದರು . ಶಾಸಕಿ ಕು.ಭಾಗೀರಥಿ ಮುರುಳ್ಯ ಮತ್ತು ತಂಡ. ಪುಸ್ಪಾ ಮೇದಪ್ಪ ಮತ್ತು ತಂಡ. ಸತ್ಯವತಿ ಬಸವನಪಾದೆ ಮತ್ತು ತಂಡ .
ಸುಳ್ಯ: ಇತಿಹಾಸ ಪ್ರಸಿದ್ಧ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಮುಹೂರ್ತ ಕೂಡಿ ಬಂದಿದ್ದು ಇಂದಿನಿಂದ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ವಿಧಿ ವಿಧಾನಗಳು ಆರಂಭಗೊಳ್ಳಲಿವೆ. ಕಳೆದ ಎರಡೂವರೆ ತಿಂಗಳುಗಳಿಂದ ಊರ ಜನತೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕಾಗಿ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದು ಕೊನೆಗೂ ಆ ಧಾರ್ಮಿಕ ಕಾರ್ಯಕ್ರಮದ ಆರಂಭಿಕ ವಿಧಾನಗಳು ಇಂದಿನಿಂದ ಪ್ರಾರಂಭಗೊಳ್ಳಲಿದೆ. ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ...
Loading posts...
All posts loaded
No more posts
