ಐವರ್ನಾಡು : ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಭೇಟಿ

ಐವರ್ನಾಡು ಗ್ರಾಮ ಬಾಂಜಿಕೋಡಿ ವಾರ್ಡ್ ಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅರ್ ಪೂಜಾರಿ ಭೇಟಿ ನೀಡಿ ಕಾರ್ಯಕರ್ತರ ಜತೆ ಮಾತುಕತೆ ನಡೆಸಿದರು.

ಸುಳ್ಯ : ತಾಲೂಕಿನಾದ್ಯಂತ ಶಾಂತಿಯುತ ಮತದಾನ – ಚಲಾವಣೆಯಾದ ಮತವೆಷ್ಟು ?

ಸುಳ್ಯ ತಾಲೂಕಿನಾದ್ಯಂತ ಇಂದು ನಡೆದ ಲೋಕಸಭಾ ಸಭಾ ಚುನಾವಣೆ ಶಾಂತಿಯುತವಾಗಿ ನಡೆಯಿತು. ಸುಳ್ಯದಲ್ಲಿ ಶೇ. 83 ಮತದಾನವಾಗಿದೆ. ಮಹಿಳೆಯರು 87565 ಹಾಗೂ 85789 ಪುರುಷರು ಮತ ಚಲಾವಣೆ ಮಾಡಿದ್ದಾರೆ.  ತಾಲೂಕಿನಲ್ಲಿ ಒಟ್ಟು 208853 ಮತದಾರರಿದ್ದು, 173354 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ 83 ಫಲಿತಾಂಶ ಪ್ರಕಟವಾಗಿದೆ. ಮಹಿಳಾ ಮತದಾರರೇ ಹೆಚ್ಚು ಮತದಾನ ಮಾಡಿದ್ದಾರೆ.
Ad Widget

ದುಗ್ಗಲಡ್ಕ ಮತ್ತು ಕೊಯಿಕುಳಿ ಬೂತ್ ಗೆ ಎನ್ ಜಯಪ್ರಕಾಶ್ ರೈ ಭೇಟಿ

ಸುಳ್ಯ ನಗರದ ದುಗ್ಗಲಡ್ಕ ಮತ್ತು ಕೊಯಿಕುಳಿ ಬೂತ್ ಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ವೀಕ್ಷಕ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್ ಜಯಪ್ರಕಾಶ್ ರೈ ಭೇಟಿ ನೀಡಿ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ಬಾಳುಗೋಡು : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ರಿಂದ ಕಾರ್ಯಕರ್ತರ ಭೇಟಿ

ಬಾಳುಗೋಡು ಮತಗಟ್ಟೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ಶೈಲೇಶ್ ಕಟ್ಟೆಮನೆ, ಪಿ.ಸಿ ಜಯರಾಮ, ಚೇತನ್ ಕಜೆಗದ್ದೆ, ರಾಧಾಕೃಷ್ಣ ಕಟ್ಟೆಮನೆ ಮತ್ತಿತರರು ಉಪಸ್ಥಿತರಿದ್ದರು.

ಮಾವಿನಕಟ್ಟೆ: ನವ ವಧುವಿನಿಂದ ಮತ ಚಲಾವಣೆ

ಮಾವಿನಕಟ್ಟೆ 159 ನೇ ಬೂತ್ ನಲ್ಲಿ ನವ ವಧು ಪತಿಯೊಂದಿಗೆ ಆಗಮಿಸಿ ಮತದಾನ ಮಾಡಿದರು.  ದೇವಚಳ್ಳ ಗ್ರಾಮದ ಅಚ್ರಪ್ಪಾಡಿ ಕೃಷ್ಣಪ್ಪ ಗೌಡರ ಪುತ್ರಿ ರಶ್ಮಿಯ ವಿವಾಹ ಇಂದು ವಳಲಂಬೆ ದೇವಸ್ಥಾನದಲ್ಲಿ ನಡೆದಿದ್ದು ನವ ವಧು ತನ್ನ ಪತಿ ಚೇತನ್ ಕುಮಾರ್ ಜತೆ ಮತದಾನ ಕೇಂದ್ರಕ್ಕೆ ಆಗಮಿಸಿ ತನ್ನ ಹಕ್ಕು ಚಲಾಯಿಸಿದರು.‌ ಈ ಸಂದರ್ಭದಲ್ಲಿ ಬಿಜೆಪಿ ಯುವ...

ಅಜ್ಜಾವರ : ಕಾರ್ಯಕರ್ತರ ಜತೆ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ

ಅಜ್ಜಾವರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ರವಿರಾಜ್ ಕರ್ಲಪ್ಪಾಡಿ, ಯತೀಶ್ ಪಡ್ಡಂಬೈಲು, ಮನ್ಮಥ ಅಡ್ಪಂಗಾಯ, ರಮೇಶ್ ಮೇದಿನಡ್ಕ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಎಲ್ ಒ ಗಳನ್ನು ನೂರು ಮೀಟರ್ ಹೊರ ಕಳಿಸಿದ ಪೋಲಿಂಗ್ ಆಫೀಸರ್

ಸುಳ್ಯ : ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದಲ್ಲಿ ದಕಜಿಪ ಅಜ್ಜಾವರ ಶಾಲೆಯಲ್ಲಿ  ಕರ್ತವ್ಯ ನಿರತ ಬಿ ಎಲ್ ಒ ಶಿವಣ್ಣರನ್ನು ಸುಡು ಬಿಸಿನಲ್ಲಿ ಯಾವುದೇ ವ್ಯವಸ್ಥೆಗಳಿಲ್ಲದೆ ಕುಳ್ಳಿರಿಸಿದ ಘಟನೆ ಬಿಎಲ್ ಒ ಗಳ ನಡುವೆ ಚರ್ಚೆಯಾಗುತ್ತಿದ್ದಂತೆ ಎಚ್ಚೆತ್ತ 197 ಬೂತ್ ಅಜ್ಜಾವರ,100 ಮೀಟರ್ ದೂರ ಹೊರಗಡೆ BLO ನಿಲ್ಲಿಸಿದ ಚುನಾವಣಾ ಅಧಿಕಾರಿ ಗಳು ತಾಲೂಕು ಪಂಚಾಯತ್...

ಬಸವನಪಾದೆ ಬಳಿಯಲ್ಲಿ ಬೈಕ್ ಸ್ಕಿಡ್ ಆಗಿ ಮಹಿಳೆ ಗಾಯ

ಸುಳ್ಯ ಅಜ್ಜಾವರ ಗ್ರಾಮದ ಬಸವನಪಾದೆ ಎಂಬಲ್ಲಿ ಮನೋಹರ್ ಮತ್ತು ತಮ್ಮ ಪತ್ನಿ ಸಹಿತ ಮನೆಗೆ ತೆರಳುವ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆಗಿ ಕಾಲಿಗೆ ಗಂಭೀರ ಗಾಯಗಳಾಗಿದೆ. ಈ ಹಿಂದಿನಿಂದಲೂ ರಸ್ತೆ ಕಾಮಗಾರಿ ಪೂರ್ಣ ಗೊಳಿಸಲು ಆಗ್ರಹಿಸುತಿದ್ದರೂ ಇಲಾಖೆಗಳು ಮಾತ್ರ ಯಾವುದೇ ರೀತಿಯಲ್ಲಿ ಕ್ರಮ ಜರುಗಿಸದೇ ಅಪಾಯಗಳು ಆಹ್ವಾನಿಸುತ್ತಿದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವರಕೊಲ್ಲಿ ಬಳಿ ಬೈಕ್ ಕಾರ್ ಡಿಕ್ಕಿ – ಬೈಕ್ ಸವಾರ ಮೃತ್ಯು!

ದೇವರಕೊಲ್ಲಿ ಎಂಬಲ್ಲಿ ಕಾರು ಹಾಗೂ ದ್ವಿಚಕ್ರ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ.  ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗುತ್ತಿರುವ ಸಂದರ್ಭ ಎದುರಿನಿಂದ ಬಂದ ಬೈಕ್  ಕಾರಿಗೆ ಢಿಕ್ಕಿಯಾಗಿದೆ ಎಂದು ಕಾರಿನಲ್ಲಿದ್ದ ದೀಕ್ಷಿತ್  ಮಂಗಳೂರು ತಿಳಿಸಿದ್ದಾರೆ.   ಈ ಅಪಘಾತದಲ್ಲಿ ಮಡಿಕೇರಿ ಮೂಲದ ಬೈಕ್ ಸವಾರ ಮಂಜುನಾಥ್ ಎಂಬುವವರು ಮೃತಪಟ್ಟ...

ಕಿಡ್ನಿಯಲ್ಲಿರುವ ಕಲ್ಲನ್ನು  ಕರಗಿಸುವ ಬಾಳೆದಿಂಡಿನ ರಸ (ಜ್ಯೂಸ್)

ಕಲ್ಪವೃಕ್ಷ ಎಂದಾಕ್ಷಣ ತೆಂಗು ಎಂದು ನಮಗೆ ನೆನಪಿಗೆ ಬರುತ್ತದೆ ಆದರೆ ಇದೀಗ ಬಾಳೆಯು ಕಲ್ಪವೃಕ್ಷವೇ ಇದರ ಎಲ್ಲಾ ಭಾಗಗಳು ಉಪಯುಕ್ತವೇ ಬಾಳೆಗೊನೆ ಮೋತೆ ದಿಂಡು ಉತ್ತಮ ಔಷಧಿಯ ಗುಣಗಳನ್ನು ಹೊಂದಿದ್ದು  ಬಹಳ ಉಪಯುಕ್ತ ಪೇಟೆ ಪಟ್ಟಣಗಳಲ್ಲಿ ಇದೀಗ ಒಂದು ಅಡಿ ಉದ್ದದ ದಿಂಡಿಗೂ ಬಹಳ ಡಿಮಾಂಡ್  ಇದರಲ್ಲಿ ಚಟ್ನಿ, ಸಾಸಿವೆ, ಸಾಂಬಾರ್, ಪಲ್ಯಾ ದಿಂಡಿನ ಪಕೋಡ,...
Loading posts...

All posts loaded

No more posts

error: Content is protected !!