- Thursday
- August 20th, 2026
ಕೊಲ್ಲಮೊಗ್ರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘದ ಸದಸ್ಯರಿಗೆ ಆರೋಗ್ಯದ ರಕ್ಷಣೆಗಾಗಿ ಯೋಜನೆಯ ಮುಖಾಂತರ ಸಂಪೂರ್ಣ ಸುರಕ್ಷಾ ಹಾಗೂ ಆರೋಗ್ಯ ರಕ್ಷಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು, ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಯೋಜನೆಯಲ್ಲಿ ಈ ವರ್ಷ ಆರೋಗ್ಯ ರಕ್ಷಾ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು...
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಸಾಮೂಹಿಕ ವಿವಾಹ ಈ ವರ್ಷ ಕೋವಿಡ್ 19 ಕಾರಣದಿಂದಾಗಿ ರದ್ದುಗೊಂಡಿರುತ್ತದೆ. ಈಗಾಗಲೇ ನೋಂದಾವಣೆ ಯಾಗಿರುವ ಜೋಡಿಗಳಿಗೆ ವಿವಾಹ ನಡೆಸಿದ್ದಲ್ಲಿ ಅವರಿಗೆ ಶ್ರೀಕ್ಷೇತ್ರದಿಂದ ಚಿನ್ನದ ತಾಳಿ ದಂಪತಿಗಳಿಗೆ ವಸ್ತ್ರ ಉಡುಗೊರೆ ಹಾಗೂ ಪ್ರತಿ ಜೋಡಿಗೆ ಹತ್ತು ಸಾವಿರದಂತೆ ಸಹಾಯಧನ ನೀಡಲಾಗುತ್ತಿದೆ. ಅದರಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ...
ಸುಳ್ಯದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವ ಕೇಂದ್ರವನ್ನು ಜ್ಯೋತಿ ಸರ್ಕಲ್ ಬಳಿಯ ಸ.ಮಾ..ಹಿ.ಪ್ರಾ.ಶಾಲೆಯಿಂದ ಕೆ.ವಿ.ಜಿ. ಪುರಭವನಕ್ಕೆ ಸ್ಥಳಾಂತರ ಮಾಡಲಾಗಿದೆ. ಸುಳ್ಯದಲ್ಲಿ ಕೊರೊನ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ. ಲಸಿಕೆ ನೀಡುವ ಮೊದಲು ನೋಂದಣಿ ಮಾಡಬೇಕಾಗಿದ್ದು ಸರ್ವರ್ ಸಮಸ್ಯೆಯಿಂದ ವಿಳಂಬವಾಗುತ್ತಿದೆ ಎಂದು ಸಿಬ್ಬಂದಿಗಳು ಹೇಳುತ್ತಿದ್ದಾರೆ. ಲಸಿಕೆ ನೀಡುವಲ್ಲಿ...
ರಾಜ್ಯದಲ್ಲಿ ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಹಾಲಿನ ಮಳಿಗೆಗಳನ್ನು ಇಂದಿನಿಂದ (ಏ.30) ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ತೆರೆಯಲು ಅನುಮತಿ ನೀಡಲಾಗಿದೆ. ಈ ಕುರಿತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.ರಾಜ್ಯದಲ್ಲಿ ಕೋವಿಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಬೆಳಿಗ್ಗೆ 6-10 ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ...
ಅರಂತೋಡಿನಲ್ಲಿ ಇಂದು ಸುರಿದ ಭಾರಿ ಗಾಳಿ ಮತ್ತು ಮಳೆಗೆ ಬಿಳಿಯಾರು ಸಮೀಪ ಮರ ಬಿದ್ದು ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬ ಧರೆಗುರುಳಿದೆ.
ಕೆರೆಮೂಲೆ ರಸ್ತೆಯಲ್ಲಿ ವಿದ್ಯುತ್ ಲೈನ್ ಮೇಲೆ ತೆಂಗಿನ ಮರ ಬಿದ್ದ ಕೆರೆಮೂಲೆ ಮತ್ತು ರಥಬೀದಿಯ ವಿನಾಯಕ ಕಾಂಪ್ಲೆಕ್ಸ್ ಬಳಿಯ ವಿದ್ಯುತ್ ಕಂಬ ಮುರಿದುಬಿದ್ದಿದೆ. ರಸ್ತೆಯಲ್ಲಿ ಜನ ಸಂಚಾರ ಇಲ್ಲದೇ ಇರುವುದರಿಂದ ಯಾರಿಗೂ ಹಾನಿಯಾಗಿಲ್ಲ. ಇದೇ ಕಂಬದಲ್ಲಿ 4 ಲೈನ್ ಹಾದುಹೋಗುತ್ತಿದ್ದು ಸುಬ್ರಹ್ಮಣ್ಯ, ಕೇನ್ಯ, ಕೇರ್ಪಳ ಹಾಗೂ ಅರಂತೋಡು ಪೀಡರ್ ಗಳಲ್ಲಿ ವಿದ್ಯುತ್ ವಿಳಂಬವಾಗಲಿದೆ. ಸ್ಥಳಕ್ಕೆ ಮೆಸ್ಕಾಂ...
ಕೊರೋನಾ ಮಹಾಮಾರಿಯಿಂದ ರಾಜ್ಯದಲ್ಲಿ ಲಾಕ್ ಡೌನ್ ಇರುವುದರಿಂದ ಎ.28 ರಿಂದ ಮೇ.12 ರವರೆಗೆ ಕೊಲ್ಲಮೊಗ್ರ-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ರಜಾ ದಿನಗಳನ್ನು ಹೊರತು ಪಡಿಸಿ ಉಳಿದ ದಿನ ವ್ಯವಹಾರ ಲಭ್ಯವಿರುತ್ತದೆ. ✍ವರದಿ:-ಉಲ್ಲಾಸ್ ಕಜ್ಜೋಡಿ
ಸುಳ್ಯ ವಿಧಾನ ಸಭಾ ಕ್ಷೇತ್ರದ ಕೋವಿಡ್ ಸಂಬಂಧಿ ಸೇವೆಗಳ ವಿಚಾರಣೆಗಳಿಗೆ ಎನ್.ಎಸ್.ಯು.ಐ ಸುಳ್ಯ ವತಿಯಿಂದ ಸಹಾಯವಾಣಿ ಸೌಲಭ್ಯವನ್ನು ಆರಂಭಿಸಲಾಗಿದೆ. ವಿಚಾರಣೆಗಳಿಗಾಗಿ 9481309163, 9845628109, 9448088598, 8861191587 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಎನ್ ಎಸ್ ಯು ಐ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಕೀರ್ತನ್ ಕೊಡಪಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗ ಹರಡಲು ಇದಕ್ಕಿಂತ ಉದಾಹರಣೆ ಬೇರೊಂದು ಬೇಕಾಗಿಲ್ಲ. ಸುಳ್ಯದ ನಗರದ ಹೃದಯ ಭಾಗವಾಗಿರುವ ಗಾಂಧಿನಗರ ಅನ್ಸಾರ್ ಕಾಂಪ್ಲೆಕ್ಸ್ ಗೆ ಹೋಗುವ ರಸ್ತೆಯ ಸಮೀಪದಲ್ಲಿ ಕಸ ರಾಶಿ ಬಿದ್ದಿದೆ. ಇಲ್ಲಿ ದುರ್ನಾತ ಬೀರುತ್ತಿರುವ ತ್ಯಾಜ್ಯಗಳಿಂದಾಗಿ ಪಾದಚಾರಿಗಳಿಗೆ ಮೂಗು ಮುಚ್ಚಿಕೊಂಡು ನಡೆದಾಡುವಂತಹ ಪರಿಸ್ಥಿತಿ ಇದ್ದರೂ ಕೂಡ ಜನಪ್ರತಿನಿಧಿಗಳು ಇತ್ತಕಡೆ ಗಮನಹರಿಸದೇ, ನಗರ ಪಂಚಾಯತ್ ಆವರಣದಲ್ಲಿ ಕಸ ರಾಶಿ...
ಕೊರೊನಾ ಮಹಾಮಾರಿಯ ಎರಡನೇ ಅಲೆಯು ಲಗ್ಗೆ ಇಟ್ಟಿದ್ದು ಇದು ಮೊದಲನೆಯ ಅಲೆಗಿಂತ ಹೆಚ್ಚು ಭೀಕರವಾಗಿದ್ದು ಈ ಸಂದರ್ಭದಲ್ಲಿ ಕೊಲ್ಲಮೊಗ್ರ ಹಾಗೂ ಸಮೀಪದ ಗ್ರಾಮಗಳದಲ್ಲಿ ಕೊರೋನಾ ಖಾಯಿಲೆಗೆ ಸಂಬಂಧಿಸಿದ ರೋಗಿಗಳಿಗೆ ಯಾವುದೇ ಸಮಯದಲ್ಲಿ ತುರ್ತು ಸಹಾಯಕ್ಕಾಗಿ ಅಥವಾ ಇನ್ನಿತರ ಸೇವೆಗಳಿಗಾಗಿ ಯುವಕರ ತಂಡ ದಿನದ 24 ಗಂಟೆಯೂ ಕೊರೋನಾ ಖಾಯಿಲೆಗೆ ಸಂಬಂಧಿಸಿದ ರೋಗಿಗಳ ಸೇವೆಯಲ್ಲಿ ಇರಲಿದೆ. ಹಾಗೂ...
Loading posts...
All posts loaded
No more posts
