- Tuesday
- August 18th, 2026
ರಕ್ತದಾನ ಜೀವ ಉಳಿಸುವುದರ ಜೊತೆಗೆ ರಕ್ತದಾನಿಗಳ ಆರೋಗ್ಯವನ್ನು ಕಾಪಾಡುತ್ತದೆ. ಆ ನಿಟ್ಟಿನಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಆಚರಣೆಯ ಈ ಸಂದರ್ಭದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸುವ ಮೂಲಕ ಯುವ ರೆಡ್ ಕ್ರಾಸ್ ಘಟಕದ ಕಾರ್ಯ ಅವಿಸ್ಮರಣೀಯವಾಗಿದೆಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ನ ಅಧ್ಯಕ್ಷರಾದ ಡಾ. ಕೆ. ವಿ ಚಿದಾನಂದ ಅವರು ಅಭಿಪ್ರಾಯಪಟ್ಟರು. ಅವರು ಸುಳ್ಯದ ನೆಹರೂ...
ಅರೋಗ್ಯ ಇಲಾಖೆಯಿಂದ ಜನವರಿ 2021ರಿಂದ ಜೂನ್ 2021ರ ವರೆಗೆ ಕೋವಿಡ್ ಪಾಸಿಟಿವ್ ಬಂದು ಕೋವಿಡ್ ಗುಣಮುಖರಾದ ಜನರಿಗೆ ಮತ್ತು ಮನೆಯ ಸದಸ್ಯರಿಗೆ ಸಕ್ರೀಯ ಕ್ಷಯ ರೋಗ ಪತ್ತೆ ಆಂದೋಲನವನ್ನು ಆ.16 ರಿಂದ 31 ರವರೆಗೆ ಹಮ್ಮಿಕೊಳ್ಳಲಾಗಿದ್ದು ಇಲಾಖೆಯ ಪ್ರಾಥಮಿಕ ಅರೋಗ್ಯ ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತರು ಜನವರಿ 2021 ರಿಂದ ಜೂನ್ 2021 ರವರೆಗೆ ಕೋವಿಡ್ ಪಾಸಿಟಿವ್...
ಪೆರುವೋಡಿ ದೇವಸ್ಥಾನಕ್ಕೆ ತೆರಳುವ ರಸ್ತೆ ತೀರಾ ಹದಗೆಟ್ಟಿದ್ದು, ಇದನ್ನು ಮನಗಂಡ ಊರಿನ ನಾಗರಿಕರು ಶ್ರಮದಾನದ ಮೂಲಕ ಸರಿಪಡಿಸಿದರು. ಈ ರಸ್ತೆ ಸಂಚಾರಕ್ಕೆ ದುಸ್ತರವಾಗಿದ್ದು ಆದಷ್ಟು ಬೇಗ ಕಾಂಕ್ರೀಟಿಕರಣಗೊಳಿಸುವಂತೆ ಗ್ರಾಮಸ್ಥರು ವಿನಂತಿಸಿದ್ದಾರೆ.
ಅಜ್ಜಾವರ ಗ್ರಾಮದ ತುದಿಯಡ್ಕ ಶ್ರೀ ಸದಾಶಿವ ದೇವಾಲಯದ ಆವರಣ ಹಾಗೂ ಸುತ್ತಮುತ್ತಲೂ ಗಿಡ ಗಂಟಿಗಳು ಬೆಳೆದಿದ್ದು ಇದನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳ ವತಿಯಿಂದ ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಸೋಮನಾಥ ಮುಳ್ಯಕಜೆ, ಕಾರ್ಯದರ್ಶಿ ಗುರುವಪ್ಪ ಹಾಗೂ ಸಂಘದ ಸದಸ್ಯರಾದ ಲಕ್ಷ್ಮಣ, ಕುಶಲ, ಲೋಕೇಶ್,ಅಜಿತ್ ಕುಶಾಲಪ್ಪ, ಕಮಲಾಕ್ಷ ಮುಂತಾದವರು ಪಾಲ್ಗೊಂಡಿದ್ದರು.
ಅಮರಮುಡ್ನೂರಿನ ಅಮರ ಸಂಘಟನಾ ಸಮಿತಿಯಿಂದ ಕರ್ನಾಟಕ ಅರಣ್ಯ ಇಲಾಖೆ, ಮಂಗಳೂರು ವಿಭಾಗ ಸುಬ್ರಹ್ಮಣ್ಯ, ಉಪ ವಿಭಾಗ ಪಂಜ ವಲಯ ಮತ್ತು ಗ್ರಾಮ ಪಂಚಾಯತ್ ದೇವಚಳ್ಳ ಇದರ ಸಂಯುಕ್ತ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ 'ಮರ ಬೆಳೆಸಿ, ಬರ ಅಳಿಸಿ-ತಾಪ ಇಳಿಸಿ' ಧ್ಯೇಯದೊಂದಿಗೆ ದೇವಚಳ್ಳದ ಮಾವಿನಕಟ್ಟೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಮತ್ತು ಕಳೆದ ಬಾರಿ ನೆಟ್ಟಿರುವ ಗಿಡಗಳ...
ಕರ್ನಾಟಕ ರಾಜ್ಯ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ಕೊಡಮಾಡುವ 2020-21 ನೇ ರಾಜ್ಯ ಮಟ್ಟದ ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ಸುಳ್ಯದ ಡಾ.ರೇವತಿ ನಂದನ್ ರವರು ಬರೆದ ಕೃತಿ ‘ತೋಟದ ಲೋಕದ ಪಾಠಗಳು’ ಕೃತಿ ಭಾಜನವಾಗಿದೆ. ಡಾ.ರೇವತಿ ನಂದನ್ ರವರು ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರು.
ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ 75 ನೇ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಯಿತು.ಧ್ವಜಾರೋಹಣ ವನ್ನು ಶಾಲಾ ಮುಖ್ಯಶಿಕ್ಷಕಿ ಯು.ಪಿ.ಕುಸುಮಾವತಿ ನೆರವೇರಿಸಿದರು.ಈ ಸಂದರ್ಭದಲ್ಲಿ ಶಿಕ್ಷಕರಾದ ಕುಮಾರ್ ಕೆ.ಎಲ್., ಜಯಲತಾ ಕೆ.ಆರ್., ಮೀನಾಕುಮಾರಿ .ಕೆ, ಸವಿತಾ ಕುಮಾರಿ, ಶಿವಪ್ರಕಾಶ ಕೆ., ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ್.ಕೆ, ಸಿಬ್ಬಂದಿ ಬೇಬಿ.ಕೆ ಇದ್ದರು.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋವಿಂದನಗರ ಮತ್ತು ಅಂಗನವಾಡಿ ಕೇಂದ್ರ ದಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಹಿರಿಯ ಮುಖ್ಯ ಗುರುಗಳಾದ ಗೋಪಾಲಕೃಷ್ಣ ಭಟ್ ರವರು ದ್ವಜಾರೋಹಣ ಸಂದರ್ಭದಲ್ಲಿ ರಾಷ್ಟ್ರ ನಾಯಕರನ್ನು ನೆನೆಯುತ್ತಾ ದೇಶಭಕ್ತಿ, ರಾಷ್ಟ್ರ ದ್ವಜದ ಮಹತ್ವ, ಸೈನಿಕರ ತ್ಯಾಗದ ಬಗ್ಗೆ ತಿಳಿಸಿದರು. ಎಸ್.ಡಿ.ಎಂ.ಸಿ ಅದ್ಯಕ್ಷರಾದ ಮುತ್ತಪ್ಪ, ಉಪಾಧ್ಯಕ್ಷರಾದ ಕಮಲ, ಕೊಲ್ಲಮೊಗ್ರು ಗ್ರಾಮಪಂಚಾಯತ್ ಸದಸ್ಯರಾದ ಶ್ರೀಮತಿ...
ಆ.15 ರಂದು ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಭಜರಂಗದಳದ ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ✍ವರದಿ :- ಉಲ್ಲಾಸ್ ಕಜ್ಜೋಡಿ
Loading posts...
All posts loaded
No more posts
