ಬಳ್ಪ : ಭೋಗಾಯನ ಕೆರೆ ಅಭಿವೃದ್ಧಿ ಕಾಮಗಾರಿ ವೇಳೆ ಹಿಟಾಚಿ ಪಲ್ಟಿ

ಬಳ್ಪ ಆದರ್ಶ ಗ್ರಾಮದ ಭೋಗಾಯನ ಕೆರೆ ಅಭಿವೃದ್ಧಿ ಕಾಮಗಾರಿ ಭರದಿಂದ ನಡೆಯುತ್ತಿದ್ದು ಈ ವೇಳೆ ಹಿಟಾಚಿ ಕೆರೆಯೊಳಗೆ ಮಗುಚಿ ಬಿದ್ದ ಘಟನೆ ಇಂದು ನಡೆದಿದೆ. ಕಾಮಗಾರಿ ಆರಂಭವಾದ ಬಳಿಕ ಎರಡನೇ ಬಾರಿಗೆ ಹಿಟಾಚಿ ಪಲ್ಟಿಯಾಗಿದೆ.

ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋದ ಚಿತ್ತ ಕಾರ್ಯಕ್ರಮದಡಿ ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯಧನ

ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋದ ಚಿತ್ತ ಯೋಜನೆಯಡಿಯಲ್ಲಿ ಸದಸ್ಯರ ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯಧನ ವಿತರಣೆ ಮಾ. 26 ರಂದು ನಡೆಯಿತು. ಫಲಾನುಭವಿಗಳಾದ ಎ.ವಿ. ಜಯರಾಮ ಚೆಂಬು ಮತ್ತು ಶರಣ್ ಕುಮಾರ ಬಿ.ಜೆ. ಕರಿಕೆ ಇವರಿಗೆ ತೆರದ ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯಧನ ತಲಾ ರೂ.50000 ದ ಚೆಕ್ ನ್ನು ಸಂಸ್ಥೆಯ ನಿರ್ದೇಶಕರಾದ ಕೃಷ್ಣ ಪ್ರಸಾದ ಮಡ್ತಿಲರವರು ಕ್ಯಾಂಪ್ಕೋ ಸುಳ್ಯ...
Ad Widget

ಎ.12 ರಿಂದ ಕೇಶವ ಕೃಪಾದಲ್ಲಿ ಅಂತರ್ ರಾಜ್ಯ ವೇದ ಯೋಗ ಮತ್ತು ಕಲಾ ಶಿಬಿರ

ಹಳೆಗೇಟಿನಲ್ಲಿರುವ ಶ್ರೀ ಕೇಶವಕೃಪಾದಲ್ಲಿ 22 ನೇ ವರ್ಷದ ಅಂತರ್ ರಾಜ್ಯ ಮಟ್ಟದ ವೇದ, ಯೋಗ,ಕಲಾ ಶಿಬಿರ ಎ. 12 ರಿಂದ ಮೇ.30 ರವರೆಗೆ ನಡೆಯಲಿದೆ ಎಂದು ಸಂಚಾಲಕ ವೇದಮೂರ್ತಿ ಅಭಿರಾಮ್ ಭಟ್ ಹೇಳಿದರು.ಅವರು ಮಾ.26 ರಂದು ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿ, ಶಿಬಿರದಲ್ಲಿ ಉಚಿತವಾಗಿ ವೇದ ಯೋಗ ಹಾಗೂ ಕಲಾ ಶಿಕ್ಷಣದೊಂದಿಗೆ ಅಶನ, ವಸನ, ಪಠ್ಯ,...

ಸುಳ್ಯ: ಮೇ.4 ರಿಂದ 8 ವರೆಗೆ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟ – ಮೈದಾನ ನಿರ್ಮಾಣಕ್ಕೆ ಭೂಮಿ ಪೂಜೆ

ಸುಳ್ಯದಲ್ಲಿ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟಮೇ.4 ರಿಂದ 8 ರ ವರೆಗೆ ನಡೆಯಲಿದೆ. ಇದರ ಪೂರ್ವ ಸಿದ್ಧತೆಯಾಗಿ ಮಾ.26 ರಂದು ಬೆಳಗ್ಗೆ ವಾಲಿಬಾಲ್ ಪಂದ್ಯಾಟದ ಮೈದಾನ ನಿರ್ಮಾಣಕ್ಕೆ ಪುರೋಹಿತ ನಾಗರಾಜ ಭಟ್ ರವರ ನೇತೃತ್ವದಲ್ಲಿ ಭೂಮಿ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ವಾಲಿಬಾಲ್ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ದೊಡ್ಡಣ್ಣ ಬರೆಮೇಲು, ರಾಷ್ಟ್ರೀಯ ವಾಲಿಬಾಲ್ ಆಯೋಜನಾ ಸಮಿತಿ ಅಧ್ಯಕ್ಷ...

ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ ಪಡೆದ ಯಶಸ್ವಿ ಪಿ.ಭಟ್

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಡಿಸೆಂಬರ್ 2021 ರಲ್ಲಿ ನಡೆಸಿದ ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ಯಶಸ್ವಿ ಪಿ.ಭಟ್ ಶೇ.83.5 ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.ಈಕೆ ಶ್ರೀಮತಿ ಪೂರ್ಣಿಮಾ ಮಡಪ್ಪಾಡಿ ಅವರ ಶಿಷ್ಯೆ. ಸುಳ್ಯ ದೇವಸ್ಯ ನಿವಾಸಿ ಪ್ರಶಾಂತ್ ಭಟ್ ಮತ್ತು ಶ್ರೀಮತಿ ಪ್ರೇಮಾ ದಂಪತಿಯ ಪುತ್ರಿ. ಇವರು ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ...

ಎಲಿಮಲೆ ಮಸೀದಿಯ ಜಮಾಅತ್ ಸಮಿತಿಯ ಅಧ್ಯಕ್ಷರಾಗಿ ಐ. ಕೆ. ಮಹಮ್ಮದ್ ಇಕ್ಬಾಲ್ ಎಲಿಮಲೆ ಪುನರಾಯ್ಕೆ

ಸುಳ್ಯ ತಾಲೂಕಿನ ಪ್ರತಿಷ್ಠಿತ ಅಬ್ದು ರಿಯಾಜ್ ಜುಮ್ಮಾ ಮಸೀದಿ ಎಲಿಮಲೆಯ ಬದ್ರಿಯ ಜಮಾಅತ್ ಸಮಿತಿಯ ಅಧ್ಯಕ್ಷರಾಗಿ ಐ. ಕೆ. ಮಹಮ್ಮದ್ ಇಕ್ಬಾಲ್ ಎಲಿಮಲೆ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆ ಗೊಂಡಿರುತ್ತಾರೆ. ಎಲಿಮಲೆ ಜುಮ್ಮಾ ಮಸೀದಿಯ ಸಭಾಂಗಣದಲ್ಲಿ ಮಾ. 25 ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಐ. ಕೆ. ಮಹಮ್ಮದ್...

ಭರತನಾಟ್ಯ ಪರೀಕ್ಷೆಯಲ್ಲಿ ವಂಶಿಕಾ ಎಸ್ ಐವರ್ನಾಡು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ವತಿಯಿಂದ ನಡೆದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಕುಮಾರಿ ವಂಶಿಕಾ ಎಸ್ ರವರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ವಿದುಷಿ ಶ್ರೀಮತಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆಯಾಗಿರುತ್ತಾರೆ. ಐವರ್ನಾಡು ಗ್ರಾಮದ ಪರ್ಲಿಕಜೆಯ ಸದಾನಂದ ವಿ ಹಾಗೂ ಶ್ರೀಮತಿ ಪರಿಮಳ ದಂಪತಿಗಳ ಪುತ್ರಿ. ಪ್ರಸ್ತುತ ರೋಟರಿ ಆಂಗ್ಲಮಾಧ್ಯಮ ಶಾಲೆ ಸುಳ್ಯ ಇಲ್ಲಿ...

ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೂ ಹಬ್ಬಿದ ಗೋ ಕಳ್ಳರ ಹಾವಳಿ

https://youtu.be/51hFoz6JGqY ರಾಜ್ಯದಲ್ಲಿ ಗೊ ಹತ್ಯೆ ನಿಷೇದ ಕಾನೂನು ಜಾರಿಯಲ್ಲಿದ್ದರೂ ಗೊ ಕಳ್ಳರ ಹಾವಳಿ ಮಾತ್ರ ನಿಲ್ಲುತ್ತಿಲ್ಲ. ರಾಜ್ಯದ ಪ್ರಸಿದ್ದ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವಠಾರದ ದೇವಾಲಯದ ಪಾರ್ಕಿಂಗ್ ಜಾಗದಿಂದ ಆಂಜನೇಯ ಗುಡಿಯ ಹಿಂಬಾಗದಲ್ಲಿ ದನ ಮಲಗಿದ್ದ ಗೋವನ್ನು ಹಿಡಿದು ಇನ್ನೋವ ಕಾರಿನಲ್ಲಿ ತುಂಬಿಸಿ ಕದ್ದೊಯ್ಯಲು ಯತ್ನಿಸಿ, ವಿಫಲವಾದ ಘಟನೆ ಮಾ.23 ರಾತ್ರಿ ನಡೆದಿದೆ....

ವಕೀಲರ ಸಂಘದ ನೂತನ ಪದಾಧಿಕಾರಿಗಳಿಗೆ ಬಿಜೆಪಿ ಅಭಿನಂದನೆ

ಸುಳ್ಯ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ವಕೀಲ ನಾರಾಯಣ ಕೆ. ಅವರನ್ನು ಹಾಗು ನೂತನ ಪದಾಧಿಕಾರಿಗಳನ್ನು ಬಿಜೆಪಿ ಮಂಡಲ‌ ಸಮಿತಿ ವತಿಯಂದ ಅಭಿನಂದಿಸಲಾಯಿತು. ಬಿಜೆಪಿಮಂಡಲ‌ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹಾಗು ಬಿಜೆಪಿ ಯುವ ಮೋರ್ಚಾ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ಸುಳ್ಯ ಬಾರ್ ಅಸೋಸಿಯೇಷನ್‌ಗೆ ಆಗಮಿಸಿ ಹಾರ ಹಾಕಿ ಅಭಿನಂದಿಸಿದರು....

ಭರತನಾಟ್ಯ ಪರೀಕ್ಷೆಯಲ್ಲಿ ಅವನಿ ಮಾವಿನಕಟ್ಟೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ವತಿಯಿಂದ ನಡೆದ ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಕುಮಾರಿ ಅವನಿ ಮಾವಿನಕಟ್ಟೆ ಯವರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಇವರು ಪ್ರಥಮವಾಗಿ ವಿದುಷಿ ಶ್ರೀಮತಿ ರಾಧಿಕಾ ಕಲ್ಲೂರಾಯ ಇವರಿಂದ ತರಬೇತಿ ಪಡೆದು ನಂತರ ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ ರೈ ಮತ್ತು ವಿದುಷಿ ಸ್ವಸ್ತಿಕ ಆರ್.ಶೆಟ್ಟಿ ಇವರ ಶಿಷ್ಯೆಯಾಗಿರುತ್ತಾರೆ.ಇವರು ದೇವಚಳ್ಳ...
Loading posts...

All posts loaded

No more posts

error: Content is protected !!