- Friday
- August 21st, 2026
ಸುಬ್ರಹ್ಮಣ್ಯ ಜೂನ್ 22 : ಸುಬ್ರಹ್ಮಣ್ಯದ ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏನೆಕಲ್ ಸರಕಾರಿ ಪ್ರೌಢಶಾಲೆಯ 2023-24ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಆರ್ಥಿಕವಾಗಿ ಹಿಂದುಳಿದ ಐದು ಮಂದಿ ವಿದ್ಯಾರ್ಥಿಗಳಿಗೆ ಶನಿವಾರ ಶಿಷ್ಯವೇತನವನ್ನು ವಿತರಿಸಲಾಯಿತು.ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾl ಎ.ಎ ತಿಲಕ್ ಹಾಗೂ...
ಆಲೆಟ್ಟಿ : ಸ.ಕಿ.ಪ್ರಾ.ಶಾಲೆ ಪೈಂಬಚ್ಚಾಲು ಇದರ ಹಳೆ ವಿದ್ಯಾರ್ಥಿಗಳ ನೂತನ ಸಮಿತಿಯನ್ನು ರಚನೆಯು , ಜೂ.23 ರ ಆದಿತ್ಯವಾರ ರಚಿಸಲಾಯಿತು. ನೂತನ ಸಮಿತಿ ಅಧ್ಯಕ್ಷರಾಗಿ ನಿಸಾರ್.ಟಿ. ಎಂ , ಉಪಾಧ್ಯಕ್ಷರಾಗಿ ಮುಈನುದ್ದೀನ್ ಕೆ.ಎಂ., ಪ್ರ.ಕಾರ್ಯದರ್ಶಿ ಅನಸ್.ಪಿ ಎ ಜೊತೆ ಕಾರ್ಯದರ್ಶಿ: ತಮೀಂ ಟಿ. ಐ ,ಕೋಶಾಧಿಕಾರಿ: ಮುನೀರ್ ಸಿ. ಎ ಆಯ್ಕೆಯಾದರು. ಈ ಸಂದರ್ಭದಲ್ಲಿ ಶಾಲೆಯ...
ಬೊಳುಬೈಲ್ ನಿಂದ ಪಿಲಿಕೋಡಿ ವರೆಗೆ ದೇವರಗುಂಡ ಪೀಡರ್ ಹಾದುಹೋಗುವಲ್ಲಿ ವಿದ್ಯುತ್ ಲೈನ್ ಗೆ ತಾಗುತ್ತಿರುವ ಮರದ ಗೆಲ್ಲುಗಳ ತೆರವುಗೊಳಿಸುವ ಕಾರ್ಯ ಜೂ.23 ರಂದು ನಡೆಯಿತು. ಈ ಸಂದರ್ಭದಲ್ಲಿ ಮೆಸ್ಕಾಂ ಸಿಬ್ಬಂದಿಗಳಿಗೆ ಪಿಲಿಕೋಡಿ ಭಾಗದ ಬಳಕೆದಾರರು ಸಹಕಾರ ನೀಡಿದರು.
ಬೈಕೊಂದು ಚಾಲಕನ ನಿಯಂತ್ರಣ ತಪ್ಪಿ 10 ಆಳಕ್ಕೆ ಬಿದ್ದ ಘಟನೆ ಕಲ್ಮಡ್ಕದಿಂದ ವರದಿಯಾಗಿದೆ. ಕಲ್ಮಡ್ಕ ತಿರುವಿನಲ್ಲಿ ಬೈಕೊಂದು ಸವಾರನ ನಿಯಂತ್ರಣ ತಪ್ಪಿ ಗುಂಡಿಗೆ ಮಗುಚಿ ಬಿದ್ದಿದೆ. ಆದರೆ ಸವಾರರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು,ಅಪಾಯದಿಂದ ಪಾರಾಗಿದ್ದಾರೆ.
ಸುಳ್ಯ: ಬಿಜೆಪಿ ರಾಷ್ಟ್ರೀಯ ನಾಯಕ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಎರಡು ದಿನಗಳ ಜಿಲ್ಲಾ ಪ್ರವಾಸದಲ್ಲಿದ್ದು ಇದೀಗ ಕುಕ್ಕೆ ಸುಬ್ರಹ್ಮಣ್ಯ ದೇವಾಲಕ್ಕೆ ಆಗಮಿಸಿದ್ದು ಮಾಜಿ ಮುಖ್ಯಮಂತ್ರಿಗಳನ್ನು ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಶಾಲು ಹೊದಿಸಿ ಹೂ ಗುಚ್ಚ ನೀಡಿ ಆತ್ಮಿಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರು ಜೊತೆಗಿದ್ದರು. ಪೂಜಾ ಕಾರ್ಯ ಮುಗಿದ...
ಶತಮಾನೋತ್ಸವ ಆಚರಿಕೊಂಡ ಕಂದ್ರಪ್ಪಾಡಿ ಶಾಲಾ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಅವಿನಾಶ್ ಜಿ ಎಸ್ ಹಾಗೂ ಶ್ರೀಮತಿ ಸ್ವಪ್ನಾ ಅವರು ಅವಿರತ ಫೌಂಡೇಶನ್ ನ ಸಹಯೋಗದೊಂದಿಗೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಿದರು. ಅವಿನಾಶ್ ಜಿ ಎಸ್ ಹಾಗು ಶ್ರೀಮತಿ ಸ್ವಪ್ನಾ ಅವರು ತಮ್ಮ ಮಗನಾದ ನಿರ್ಮಯ್ ಅವರ ಹೆಸರಿನಲ್ಲಿ ಗ್ರಾಮೀಣ ಪರಿಸರದ ವಿದ್ಯಾರ್ಥಿಗಳ ಕಲಿಕೆಗೆ...
ಬಾಳಿಲದ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಗೆ ಚಿಕ್ಕಬಳ್ಳಾಪುರದ "ಸಂಕಲ್ಪ" ತಂಡ ಹಾಗೂ ಡಾ.ಕಿಶನ್ ರಾವ್ ಬಾಳಿಲ ಇವರು ಜೊತೆಯಾಗಿ ಶಾಲೆಯ ಅಗತ್ಯ ಸಾಮಾಗ್ರಿಗಳನ್ನು ನೀಡಿದ್ದು ಇದರ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.ಚಿಕ್ಕಬಳ್ಳಾಪುರದ ಸಂಕಲ್ಪ ಬಳಗವು ಚಿಕ್ಕಬಳ್ಳಾಪುರದ ಹತ್ತಾರು ಗ್ರಾಮೀಣ ಶಾಲೆಗಳಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿದೆ. ಈ ತಂಡದಲ್ಲಿ ವೈದ್ಯರುಗಳಾದ ಡಾ.ಭಾಸ್ಕರ ಬೆಂಗಳೂರು,...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿಯ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ ಗ್ರಾಮ ಪಂಚಾಯತ್ ಗುತ್ತಿಗಾರು ಅನುಮತಿಯೊಂದಿಗೆ, ಗ್ರಾಮ ಪಂಚಾಯತ್ ಸದಸ್ಯ ವಿಜಯ್ ಕುಮಾರ್ ಚಾರ್ಮಾತ ಇವರ ಮೇಲುಸ್ತುವಾರಿಯೊಂದಿಗೆ ಮಾಡಲಾಯಿತು. ಮುಖ್ಯ ಶಿಕ್ಷಕರಾದ ಶ್ರೀ ಚಂದ್ರಶೇಖರ ಪಾರೆಪ್ಪಾಡಿ ಮೊದಲಿಗೆ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳೊಂದಿಗೆ ಎಸ್ ಡಿ ಎಂ ಸಿ ರಚನೆ...
ಕಾಂಕ್ರೀಟೀಕರಣಗೊಂಡ ದೇವಚಳ್ಳ ಗ್ರಾಮದ ದೇವ ಕಾಲೋನಿ ರಸ್ತೆ ಉದ್ಘಾಟನೆ ಇಂದು ನೆರವೇರಿತು. ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷರಾದ ಕಿಶೋರ್ ಅಂಬೆಕಲ್ಲು ಮತ್ತು ಸಂಜೀವಿನಿ ಒಕ್ಕೂಟದ ತಾರಾ ರವೀಂದ್ರ ಅಡ್ಡನಪಾರೆ ನೆರವೇರಿಸಿದರು. ಕಾಲೋನಿಯ ಹಿರಿಯರಾದ ಬಾಬು ದೇವ ತೆಂಗಿನ ಕಾಯಿ ಒಡೆದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ಪಿಡಿಓ ಗುರುಪ್ರಸಾದ್, ರಾಮಚಂದ್ರ ದೇವ, ಕುಸುಮಾಧರ...
ಭಾರತೀಯ ಜನತಾ ಪಾರ್ಟಿಯ ಸುಳ್ಯಮಂಡಲದ ನೂತನ ಕಾರ್ಯಾಲಯವು ಆಯುರ್ವೇದಿಕ್ ಕಾಲೇಜಿನ ಬಳಿಯ ನಿವೇಶನದಲ್ಲಿ ಜೂನ್ 24ರಂದು ಉದ್ಘಾಟನೆಗೊಳ್ಳಲಿದ್ದು, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಬಿಜೆಪಿಯ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯರಾಗಿರುವ ಬಿಎಸ್ ಯಡಿಯೂರಪ್ಪನವರು ನೂತನ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಯಡಿಯೂರಪ್ಪನವರು ಜೂನ್ 23 ರಂದು ಸಂಜೆ ಧರ್ಮಸ್ಥಳಕ್ಕೆ ಆಗಮಿಸಿ ಜೂನ್ 24ರಂದು ಧರ್ಮಸ್ಥಳದ ಬೆಳಗಿನ ಪೂಜೆಯಲ್ಲಿ ಭಾಗವಹಿಸಿ ನಂತರ...
Loading posts...
All posts loaded
No more posts
